ವಿಶ್ವಕಪ್ 2023 ಫೈನಲ್ ಗೆ ಕ್ಷಣಗಣನೆ ಶುರುವಾಗಿದೆ. ವಿಶ್ವದ ಕ್ರಿಕೆಟ್ ಅಭಿಮಾನಿಗಳ ಚಿತ್ತ ಇದೀಗ ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನತ್ತ ನೆಟ್ಟಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ರೋಹಿತ್ ಶರ್ಮಾ ನಾಯಕತ್ವ ಭಾರತ ಹಾಗೂ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ನಡುವೆ ಪ್ರಶಸ್ತಿಗಾಗಿ ಅಂತಿಮ ಕಾದಾಟ ನಡೆಯಲಿದೆ.
ಪಂದ್ಯ ಆರಂಭಕ್ಕೂ ಮುನ್ನ ಸಮಾರೋಪ ಸಮಾರಂಭ ಆಯೋಜನೆ ಮಾಡಲಿದೆ. ಇದರಲ್ಲಿ ಬಾಲಿವುಡ್ ತಾರೆಯರು ನೃತ್ಯ ಮಾಡಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಅಲ್ಲದೆ ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ತಂಡವು ತಮ್ಮ ವೈಮಾನಿಕ ಕೌಶಲ್ಯಗಳನ್ನು ಪ್ರಸ್ತುತಪಡಿಸಲಿದೆ.
ಪ್ರಧಾನಿ ಮೋದಿ, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಜೊತೆಗೆ ಭಾರತದ ಗೃಹ ಸಚಿವರಾದ ಅಮಿತ್ ಶಾ ಕೂಡ ಈ ಪಂದ್ಯವನ್ನು ಕಣ್ತುಂಬಿ ಕೊಳ್ಳುವುದರ ಜೊತೆಗೆ ತಂಡಗಳನ್ನು ಹುರಿದುಂಬಿಸಲಿದ್ದಾರೆ.