ಮಂಜೇಶ್ವರ ಬಿ ಆರ್ ಸಿ ಯ ನೇತೃತ್ವದಲ್ಲಿ ಐಇಡಿ ಸಿ ಮೆಡಿಕಲ್ ಕ್ಯಾಂಪು ದಿನಾಂಕ 6.07.2024 ರಂದು ಬಿಆರ್‌ಸಿ ಮಂಜೇಶ್ವರದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಇರ್ಫಾನ ಇಕ್ಬಾಲ್ ಎಜುಕೇಶನ್ ಸ್ಟ್ಯಾಂಡಿಂಗ್ ಕಮಿಟಿ ಮಂಗಲ್ಪಾಡಿ ಪಂಚಾಯತ್ ಇವರು ವಹಿಸಿದ್ದರು. ಮೆಡಿಕಲ್ ಕ್ಯಾಂಪಿನ ಉದ್ಘಾಟನೆಯನ್ನು ಡಿಸ್ಟ್ರಿಕ್ಟ್ ಪಂಚಾಯತ್ ಮೆಂಬರ್ ಶ್ರೀ ಗೋಲ್ಡನ್ ಅಬ್ದುಲ್ ರಹಿಮಾನ್ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಡಾ. ಬಾಲಸುಬ್ರಮಣ್ಯಂ ಅಸಿಸ್ಟೆಂಟ್ ಪ್ರೊಫೆಸರ್ ಡಿಪಾರ್ಟ್ಮೆಂಟ್ ಆಫ್ ಸೈಕ್ಯಾಟ್ರಿಸ್ಟ್ ಮೆಡಿಕಲ್ ಕಾಲೇಜ್ ಕೇರಳಕಟ್ಟೆ ಇವರು ಶುಭಕೋರಿದರು. ಕಾರ್ಯಕ್ರಮಕ್ಕೆ ಪ್ರಸ್ತಾವನೆಯನ್ನು ಶ್ರೀ ಜಾಯ್ ಜಿ. ಬಿಪಿಸಿ ಬಿ ಆರ್ ಸಿ ಮಂಜೇಶ್ವರ ಮಾಡಿದರು. ಕಾರ್ಯಕ್ರಮಕ್ಕೆ ಶ್ರೀಮತಿ ಸುಮದೇವಿ ಟ್ರೈನರ್ ಬಿ ಆರ್ ಸಿ ಮಂಜೇಶ್ವರ ಸ್ವಾಗತವನ್ನು ಹಾಗೂ ಧನ್ಯವಾದವನ್ನು ಶ್ರೀಮತಿ ಅನಿತಾ ವೇಗಸ್ ಸ್ಪೆಶಲ್ ಎಜುಕೇಟರ್ ಕೋರಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರೀಮಾ ಮೊಂತೇರೋ ಸ್ಪೆಷಲ್ ಎಜುಕೇಟರ್ ನಿರ್ವಹಿಸಿದರು.