ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Share with

ಬೆಂಗಳೂರು: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯೊಬ್ಬರು ಕಣ್ಣು ಮಿಟುಕಿಸಿದರೆ ಸಾಕು, ಆ ರೋಗಿಯನ್ನು ಆರೈಕೆ ಮಾಡುತ್ತಿರುವ ಶುಶ್ರೂಷಕಿ ಅಥವಾ ನೋಡಿ ಕೊಳ್ಳುವ ಕುಟುಂಬದ ಸದಸ್ಯರ ಮೊಬೈಲ್‌ಗೆ ಮೆಸೇಜ್‌ ಹೋಗುತ್ತದೆ!

ಹೇಗೆ ಅಂತೀರಾ, ಇದಕ್ಕಾಗಿ ಸ್ಮಾರ್ಟ್‌ ಗ್ಲಾಸ್‌ (ಕನ್ನಡಕ)ಗಳನ್ನು ಅಲಾಯನ್ಸ್‌ ಯೂನಿವರ್ಸಿಟಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಸ್ಮಾರ್ಟ್‌ ಕನ್ನಡಕವನ್ನು ರೋಗಿಗೆ ಧರಿಸಬೇಕು. ಅದರಲ್ಲಿನ ಡಿವೈಸ್‌ ಅನ್ನು ಮೊಬೈಲ್‌ ಮತ್ತು ಆಸ್ಪತ್ರೆಯಲ್ಲಿರುವ ಡ್ಯಾಶ್‌ಬೋರ್ಡ್‌ಗೆ ಕನೆಕ್ಟ್ ಮಾಡಲಾಗಿರುತ್ತದೆ.

ಉದಾಹರಣೆಗೆ ರೋಗಿ ವಾಶ್‌ರೂಂಗೆ ಹೋಗಬೇಕು ಅಂತ ಅಂದುಕೊಂಡಿದ್ದರೆ, ಒಂದು ಬಾರಿ ಕಣ್ಣು ಪಿಳುಕಿಸುವ ಸಂಕೇತ ನೀಡಲಾಗಿರುತ್ತದೆ. ನೀರು ಬೇಕಿದ್ದರೆ ಎರಡು ಬಾರಿ ಕಣ್ಣು ಪಿಳುಕಿಸುವ ಸಂಜ್ಞೆ ನೀಡಲಾಗಿರುತ್ತದೆ.
ಹೀಗೆ 15 ತರಹದ ಸಂಕೇತಗಳನ್ನು ನೀಡಲಾಗಿರುತ್ತದೆ. ಅದನ್ನು ಆಧರಿಸಿ ರೋಗಿಯ ಅಗತ್ಯಗಳನ್ನು ಶುಶ್ರೂಷಕರು ಪೂರೈಸಲು ಈ ಕನ್ನಡಕ ನೆರವಾಗುತ್ತದೆ. ಪಾರ್ಶ್ವವಾಯು, ಅಪಘಾತ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿರುವ, ಕೈಕಾಲುಗಳು ಸ್ವಾಧೀನ ಕಳೆದುಕೊಂಡಿರುವ ರೋಗಿಗಳಿಗೆ ಇದು ಹೇಳಿಮಾಡಿಸಿದ್ದಾಗಿದೆ. ಇದರ ಪೇಟೆಂಟ್‌ ದೊರಕಿದ್ದು, ಶೀಘ್ರ ಮಾರುಕಟ್ಟೆಗೆ ಬರಲಿದೆ ಎಂದು ಈ ವಿನೂತನ ಕನ್ನಡಕ ಅಭಿವೃದ್ಧಿಪಡಿಸಿದ ಅಲಾಯನ್ಸ್‌ ಯೂನಿವರ್ಸಿಟಿಯ ಶೇಷಾದ್ರಿ ವಿವರಿಸಿದರು.


Share with

Leave a Reply

Your email address will not be published. Required fields are marked *