ಸ್ವಾಮೀಜಿ ಅರೆಸ್ಟ್‌ ಅದ್ರೆ ಎಲ್ಲಾ ಸತ್ಯ ಹೊರಬರುತ್ತದೆ: ಚೈತ್ರ ಕುಂದಾಪುರ

Share with

Chaitra Kundapur said that if Swamiji is arrested, the truth will come out.

ಬೆಂಗಳೂರು: ಸ್ವಾಮೀಜಿ ಅರೆಸ್ಟ್‌ ಅದ್ರೆ ಎಲ್ಲಾ ಸತ್ಯ ಹೊರಬರುತ್ತದೆ ಎಂದು ಸಿಸಿಬಿ ಕಚೇರಿಗೆ ತೆರಳುವ ವೇಳೆ ಚೈತ್ರ ಕುಂದಾಪುರ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಇಂದು ಸಿಸಿಬಿ ಕಚೇರಿಗೆ ತೆರಳುವ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈ ಕೇಸ್‌ನಲ್ಲಿ ಸ್ವಾಮೀಜಿ ಒಬ್ಬರಿದ್ದು, ಅವರನ್ನು ಬಂಧಿಸಿದ್ರೆ ದೊಡ್ಡ-ದೊಡ್ಡವರ ಹೆಸರು ಹೊರಗೆ ಬರುವುದಲ್ಲದೇ ಎಲ್ಲಾ ಸತ್ಯಗಳು ಹೊರ ಬರುತ್ತದೆ ಎಂದು ಹೇಳಿದ್ದಾರೆ. ಕ್ಯಾಂಟೀನ್‌ ಬಿಲ್‌ಗಾಗಿ ಈ ರೀತಿಯ ಷಡ್ಯಂತ್ರ ನಿರ್ಮಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಗೋವಿಂದ ಬಾಬು ಅವರಿಗೆ ಟೀಕೆಟ್‌ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಗಂಭೀರ ಆರೋಪದ ಮೇರೆಗೆ ಚೈತ್ರ ಕುಂದಾಪುರ ಅವರನ್ನು ಬಂಧಿಸಿದ್ದು, ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಅಧಿಕಾರಿಗಳು ಕಚೇರಿಗೆ ಕರೆದುಕೊಂಡು ಬಂದಿದ್ದಾರೆ.


Share with

Leave a Reply

Your email address will not be published. Required fields are marked *