ಕಾಲ್ತುಳಿತ ದುರಂತ: ಹೈಕಮಾಂಡ್ ನಲ್ಲಿ ಕಮಾಂಡ್ ಇದ್ದರೆ ಮೊದಲು ಡಿಸಿಎಂ ಮೇಲೆ ಕ್ರಮ ಕೈಗೊಳ್ಳಲಿ: ಪ್ರಹ್ಲಾದ್ ಜೋಶಿ

Share with

ಮೈಸೂರು: ಬುಧವಾರ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ರಾಜ್ಯ ಸರಕಾರವೇ ನೇರ ಹೊಣೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಘಟನೆಯ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರವೇ ನೈತಿಕ ಹೊಣೆ ಹೊರಬೇಕು. ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಒಂದು ಕ್ಷಣ ಕೂಡ ತಮ್ಮ ಸ್ಥಾನದಲ್ಲಿ ಮುಂದುವರಿಯಬಾರದು. ಈ ಕ್ಷಣವೇ ಸಿಎಂ ಹಾಗೂ ಡಿಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬೆಂಗಳೂರು ಕಮಿಷನ್ ಬರವಣಗೆಯಲ್ಲಿ ಭದ್ರತೆ ನಿರಾಕರಿಸಿಲ್ಲ ಎಂಬ ಕಾರಣಕ್ಕೆ ಸಸ್ಪೆಂಡ್ ಮಾಡಿದ್ದೀರಿ. ನಿವೇ ನಿಮ್ಮ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳಿಗೆ ಕರೆ ಕೊಟ್ಟಿಲ್ವ. ನಿಮ್ಮ ಡಿಸಿಎಂ ಏರ್‌ಪೋರ್ಟ್ ಗೆ ಹೋಗಿ ಬಾವುಟ ಹಿಡಿದುಕೊಂಡು ಬರಲಿಲ್ವ. ಇಡೀ ದಿನ ಡಿಕೆ.ಶಿವಕುಮಾರ್ ದಾದಾಗಿರಿ ಮಾಡಿದ್ದಾರೆ. ಹೈಕಮಾಂಡ್ ನಲ್ಲಿ ಕಮಾಂಡ್ ಇದ್ದರೆ ಮೊದಲು ಇವರ ಮೇಲೆ ಕ್ರಮ ಕೈಗೊಳ್ಳಿ. ರಾಹುಲ್‌ಗಾಂಧಿ ಇಡೀ ಪ್ರಪಂಚದಾದ್ಯಂತ ಹೋಗಿ ಎಲ್ಲವನ್ನ ಮಾತನಾಡುತ್ತಾರೆ. ಈ ಘಟನೆ ಬಗ್ಗೆ ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು.

ಆರ್‌ಸಿಬಿ ವಿಜಯದ ನಂತರ ನಿನ್ನೆ ಆದದ್ದು ಅತ್ಯಂದ ದೌರ್ಭಾಗ್ಯದ ದಿನ. ಮಿಸ್ ಮ್ಯಾನೇಜೆಂಟ್ ಮಾಡಿದ ಸರ್ಕಾರ ತರಾತುರಿಯಲ್ಲಿ ಹುಚ್ಚರಂತೆ ವರ್ತನೆ ಮಾಡ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಮೂರು ಜನ ಸತ್ತ ನಂತರವೂ ವಿಧಾನಸೌಧದ ಬಳಿ ಸಿಎಂ, ಡಿಸಿಎಂ, ಅವರ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು, ಐಎಎಸ್ ಆಫಿಸರ್‌ಗಳು ಸೆಲ್ಸಿ ಪೋಟೋ ತೆಗೆಸಿಕೊಳ್ಳುತ್ತಿದ್ರು. ಅವರು ಸೆಲ್ಸಿ ತೆಗೆಸಿಕೊಳ್ಳುವಾಗ ಅಲ್ಲಿ ಮೂರು ಜನ ಸತ್ತಿದ್ರು. ಇದು ಅಕ್ಷಮ್ಯ ಅಪರಾಧ ಅಲ್ಲವೆ. ನೀವು ಮಾನಸಿಕ ಸ್ಥಿತಿಮಿತಿ ಕಳೆದುಕೊಂಡಿದ್ದೀರ ಎಂದು ಕಿಡಿಕಾರಿದರು.

11 ಜನ ಸತ್ತ ನಂತರೂ ಕಾರ್ಯಕ್ರಮ ನಡೆದಿದೆ. ಅವತ್ತು ತರಾತುರಿಯಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ಅಂದ್ರಿ. ಇದಕ್ಕೆ ಪ್ರಮೋಟಿ ಐಎಎಸ್‌ ಆಫಿಸರ್ ನೇಮಕ ಮಾಡಿದ್ದೀರಿ. ಇಷ್ಟು ತರಾತುರಿ ಯಾಕೆ, ಯಾರನ್ನ ನೀವು ರಕ್ಷಣೆ ಮಾಡಬೇಕಿತ್ತು. ಹೈಕೋರ್ಟ್ ಸುಮೋಟೊ ಕೇಸ್ ಹಾಕಿದ ನಂತರ ಹಿರಿಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೀರಿ. ಬೆಂಗಳೂರು ಪೊಲೀಸ್ ಕಮಿಷನ‌ರ್ ಒಬ್ಬ ದಕ್ಷ ಅಧಿಕಾರಿ. ಅವರು ಪತ್ರದಲ್ಲಿ ಅನುಮತಿ ನಿರಾಕರಿಸಲಿಲ್ಲ ಎಂಬ ಕಾರಣ ಕೊಟ್ಟಿದ್ದೀರಿ. ನೀವೇ ವಿಧಾನಸೌಧದ ಮುಂದಿನ ಕಾರ್ಯಕ್ರಮದ ಬಗ್ಗೆ ಟ್ವಿಟ್ ಮಾಡಿದ್ದೀರಿ. ನೀವು ಓಪನ್ ಕರೆ ಕೊಟ್ಟಿದ್ದಕ್ಕೆ ಅಷ್ಟು ಜನ ಬಂದಿದ್ದಾರೆ.

ಡಿ.ಕೆ.ಶಿವಕುಮಾ‌ರ್ ಹೋಗಿ ರಿಸೀವ್ ಮಾಡಿಕೊಂಡಿದ್ದಾರೆ. ಅವರಿಗೆ ಬುದ್ದಿ ಇರಲಿಲ್ವ. ಅವರನ್ನ ಉಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ತನಿಖೆ ಮಾಡ್ತೀರಾ. ಪೊಲೀಸ್‌ ಇಲಾಖೆ ನಿರಾಕರಿಸಿದ ನಂತರವೂ ಅವರನ್ನ ಕರೆಸಿದ್ದು ಯಾರು ಎಂದು ಪ್ರಶ್ನೆ ಮಾಡಿದರು. ನೀವು ಟ್ವಿಟ್ ಮಾಡ್ತೀರಿ, ಅವರು ರಿಸೀವ್ ಮಾಡ್ತಾರೆ. ಕ್ರಮ ಪೋಲಿಸರಿಗಾ.

ಡಿಕೆಶಿ ಯವರು ತಾವು ಕೋಚ್ ಎಂದುಕೊಂಡಿದ್ದಾರೆ. ಸಾಧನೆ ಮಾಡಿದವರ ಜೊತೆ ನಿಂತು ಕ್ರೆಡೀಟ್ ತಗಳೊ ಚಟ ನಿಮಗೆ. ಆ ಉಪ ಮುಖ್ಯಮಂತ್ರಿ ಯನ್ನ ಏನು ಮಾಡ್ತೀರಿ. ನೀವು ಕರೆ ಕೊಟ್ಟಿದ್ದಕ್ಕೆ ಯಾವ ನೈತಿಕ ಹೊಣೆ ಹೊರ್ತೀರಿ. ಐಪಿಎಲ್ ಟ್ರೋಪಿಗೆ ಮುತ್ತು ಕೊಟ್ರಲ್ಲ, ನಾಚಿಕೆ ಆಗಲಿಲ್ವ. ಅಭಿಮಾನಿಗಳು ಸತ್ತ ನಂತರೂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಡಿಕೆ.ಶಿವಕುಮಾ‌ರ್ ಹೋಗಿದ್ದಾರೆ. ದಯಾನಂದ್ ಅನುಮತಿ ಕೊಟ್ಟಿಲ್ಲ ಅಂದ್ರೆ ನಿಮ್ಮ ಡಿಸಿಎಂ ಯಾಕೆ ಹೋಗಿದ್ರು. ಹಿಂದೆ, ಮೂಡಾ, ವಾಲ್ಮೀಕಿ ಹಗರಣ ನಡೆದಾಗ ಅಧಿಕಾರ ಮೇಲೆ ಕ್ರಮ ವಹಿಸಿದ್ದೀರಿ.

ಇಲ್ಲಿವರೆಗೆ ಸಿಎಂ ರಾಜ್ಯದ ಜನರ ಕ್ಷಮೆ ಕೇಳಿಲ್ಲ. ನಿಮಗೆ ಜವಾಬ್ದಾರಿ ಇಲ್ವ. ನಾನು ಕರೆ ಕೊಟ್ಟಿದ್ದು ತಪ್ಪಾಯ್ತು ಅಂತ ಕೇಳಿದ್ದೀರಾ. ಆರ್‌ಸಿಬಿ ತಂಡ ನೆಕ್ಟ್ ಡೇ ಸೆಲಬ್ರೇಷನ್‌ಗೆ ತಯಾರಿರಲಿಲ್ಲ. ಸರ್ಕಾರವೇ ಒತ್ತಡ ಹಾಕಿ, ಅವರನ್ನ ಕರೆಸಿ ಸೆಲಬ್ರೇಷನ್ ಮಾಡಿದ್ದಾರೆ. ದುರ್ಘಟನೆಗೆ ಮುಖ್ಯವಾಗಿ ಉಪ ಮುಖ್ಯಮಂತ್ರಿ ಜವಾಬ್ದಾರರು. ಉಪ ಮುಖ್ಯಮಂತ್ರಿ ಒಂದು ಕ್ಷಣ ಕಾಯಲಾರದೆ ರಾಜೀನಾಮೆ ಕೊಡಬೇಕು. ಇವರು ಆಡಳಿತ ನಡೆಸಲು ಯೋಗ್ಯರಾ. ವಿಧಾನಸೌಧದ ಮುಂದಿನ ಕಾರ್ಯಕ್ರಮಕ್ಕೆ ಯಾರು ನಿಮಗೆ ಅನುಮತಿ ಕೊಟ್ಟಿದ್ರು. ಅವರಿಗೆ ವಿಮಾನ ಕೊಟ್ಟು ಕರೆಸಿದವರು ಯಾರು. ಈ ವರೆಗೆ ಆ ವಿಮಾನ ಬುಕ್ ಮಾಡಿದವರು ಯಾರು ಎಂಬುದು ಹೊರಗೆ ಬಂದಿಲ್ಲ.

ನ್ಯಾಯಾಧೀಶರನ್ನೂ ನೀವೇ ತೀರ್ಮಾನ ಮಾಡುತ್ತೀರಿ. ನೀವು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಪರ್ಕ ಮಾಡಿದ್ದೀರಿ. ಆ ನಂತರ ವಿಚಾರಣ ಅಯೋಗಕ್ಕೆ ನ್ಯಾಯಧೀಶರನ್ನ ನೇಮಿಸಿದ್ದೀರ. ಅದನ್ನ ಮೊದಲು ಬಹಿರಂಗ ಪಡಿಸಿ. ಹೈಕೋರ್ಟ್ ಮಾನಿಟರ್ ತನಿಖೆ ಆಗಬೇಕು. ಹೈಕೋರ್ಟ್‌ಗೆ ಒಪ್ಪಿಗೆ ಇದ್ರೆ ವಿಚಾರಣಾ ಆಯೋಗಕ್ಕೆ ಉತ್ತಮವಾದ ಜಡ್ಜ್ ನೇಮಕ ಮಾಡಬೇಕು.

ಐ ವಿಲ್ ಆಸ್ಕ್ ರಾಹುಲ್ ಗಾಂಧಿ. ಡು ಯು ಹ್ಯಾವ್ ಎನಿ ಸೆನ್ಸ್. ಡು ಯು ಹ್ಯಾವ್ ಎನಿ ಮೊರಾಲಿಟಿ. ನೀವು ಪ್ರಪಂಚದಲ್ಲಿ ಹೋದಲೆಲ್ಲ ಎಲ್ಲದರ ಬಗ್ಗೆ ಮಾತನಾಡ್ತೀರಿ. ಇಲ್ಲಿ ಏನಾಗಿದೆ ಅಂತ ನಿಮಗೆ ಗೊತ್ತಿಲ್ವ. ಯಾರದಾದ್ರು ರಾಜೀನಾಮೆ ಕೇಳಿದ್ದೀರ. ಡಿಸಿಎಂ ರಾಜೀನಾಮೆ ಕೇಳಿದ್ದೀರ. ಮಿಸ್ಟರ್ ರಾಹುಲ್‌ ಗಾಂಧಿ. ಕರ್ನಾಟಕದ ಬಗ್ಗೆ ಮಾತನಾಡುವ ಜವಾಬ್ದಾರಿ ನಿಮಗಿದೆ. ರಾಹುಲ್‌ಗಾಂಧಿ ಕೂಡ ಜವಾಬ್ದಾರರು. ಈ ವರೆಗೆ ಏನೂ ಮಾಡಿಲ್ಲ. ಕಾಂಗ್ರೆಸ್ ಹೈಕಮಾಂಡ್ ಘಟನೆ ಗಂಭೀರವಾಗಿ ಪರಿಗಣಿಸಬೇಕು. ಹೈಕಮಾಂಡ್ ನಲ್ಲಿ ಕಮಾಂಡ್ ಇದ್ರೆ ತಕ್ಷಣ ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *