
ಎಲ್ಲರ ಮನೆಗಳಲ್ಲೂ ಹೂವಿನ ಗಿಡಗಳಿರುತ್ತದೆ. ಕೆಲವೊಂದು ಗಿಡಗಳು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಕೆಲವೊಂದು ಗಿಡಗಳು ಅದೃಷ್ಟವನ್ನ ತರುತ್ತದೆ. ಹಾಗೆಯೇ, ಹೂವುಗಳು ಸಹ ನಮ್ಮ ಜೀವನದಲ್ಲಿ ಬದಲಾವಣೆ ತರುತ್ತವೆ.
ವಾಸ್ತು ಶಾಸ್ತ್ರದ ಪ್ರಕಾರ ಹಲವಾರು ಸಸ್ಯಗಳು ಮತ್ತು ಹೂವುಗಳನ್ನ ಬಗ್ಗೆ ತಿಳಿಸುತ್ತದೆ. ಈ ಹೂವುಗಳು ನಮ್ಮ ಜೀವನದಲ್ಲಿ ಸಕಾರಾತ್ಮಕ ವಾತಾವರಣವನ್ನು ತರುತ್ತದೆ ಎನ್ನಲಾಗುತ್ತದೆ. ಮನೆಯಲ್ಲಿ ಕೆಲವು ಹೂವುಗಳನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ . ಹಾಗಾದ್ರೆ ಅದೃಷ್ಟ ನೀಡುವ ಹೂವುಗಳು ಯಾವುದು ಎಂಬುದು ತಿಳಿಯೋಣ.
ಗುಲಾಬಿ ಹೂವು: ಲಕ್ಷ್ಮಿ ದೇವಿಯ 8 ರೂಪಗಳಲ್ಲಿ ಒಂದು ವೈಭವ ಲಕ್ಷ್ಮಿಗೆ ಕೆಂಪು ಗುಲಾಬಿ ಬಹಳ ಪ್ರಿಯ. ಹಾಗಾಗಿ ಈ ಗುಲಾಬಿ ಹೂವು ನಿಮ್ಮ ಕಷ್ಟಗಳನ್ನ ಕಡಿಮೆ ಮಾಡುತ್ತದೆ. ಗುಲಾಬಿ ಹೂವಿನ ಪರಿಮಳ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಯಾವುದೇ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗದೇ ಒದ್ದಾಡುತ್ತಿದ್ದರೆ, ಮನೆಯಿಂದ ಹೊರಡುವಾಗ ಕೂದಲು ಅಥವಾ ಬಟ್ಟೆಯಲ್ಲಿ ಗುಲಾಬಿ ಹೂವನ್ನು ಇಟ್ಟುಕೊಂಡರೆ ಅದೃಷ್ಟ ಬರುತ್ತದೆ.
ದಾಸವಾಳ ಹೂವು: ದಾಸವಾಳದ ಹೂವು ದೇವರ ಪೂಜೆಯ ಜೊತೆಗೆ ವಾಸ್ತುಶಾಸ್ತ್ರದಲ್ಲಿ ಅಗ್ರವನ್ನು ಪಡೆದಿದೆ. ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಈ ದಾಸವಾಳ ಹೂವು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ಕೆಂಪು ಧನಾತ್ಮಕ ಶಕ್ತಿಯನ್ನು ನೀಡುತ್ತದೆ.
ಲ್ಯಾವೆಂಡರ್: ಈ ಲ್ಯಾವೆಂಡರ್ ಬಹಳ ವಿಭಿನ್ನವಾದ ಹೂವಾಗಿದೆ. ಇದರ ಪರಿಮಳಕ್ಕೆ ಒತ್ತಡವನ್ನು ನಿವಾರಿಸುವ ಸಾಮರ್ಥ್ಯ ಇದೆ ಎನ್ನಲಾಗುತ್ತದೆ. ಹಾಗಾಗಿ ಅನೇಕ ಜನರು ಇದನ್ನ ಬಳಸುತ್ತಾರೆ.
ಮಲ್ಲಿಗೆ ಹೂವು – ಮಲ್ಲಿಗೆ ಹೂವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವುದು. ಇದರಿಂದ ಅನೇಕ ರೀತಿಯ ಲಾಭಗಳು ಸಿಗುತ್ತದೆ. ವಾಸ್ತು ತತ್ವಗಳ ಪ್ರಕಾರ, ಮಲ್ಲಿಗೆ ಗಿಡವು ಉತ್ತಮ ಶಕ್ತಿಯನ್ನು ತರುತ್ತದೆ ಮತ್ತು ಸಂಬಂಧದಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ.