ಲೆಸ್ಟೋಸ್ಟೈರೋಸಿಸ್ ಒಂದು ಝೂನೋಟಿಕ್ ಬ್ಯಾಕ್ಟಿರಿಯಾ ಸೋಂಕಾಗಿದ್ದು, ಸೋಂಕಿತ ಪ್ರಾಣಿಗಳ ಮೂತ್ರದ ಸಂಪರ್ಕದಿಂದ ಅಥವಾ ಅದರಿಂದ ಮಾಲಿನ್ಯಗೊಂಡ ನೀರು & ಮಣ್ಣಿನ ಸಂಪರ್ಕದಿಂದ ಹರಡುತ್ತದೆ.

ಸೋಂಕು ತಗುಲಿದ ನಂತರ 2-14 ದಿನಗಳೊಳಗೆ ಜ್ವರ, ತೀವ್ರ ತಲೆನೋವು, ದೇಹ ನೋವು, ಕಾಲು & ಬೆನ್ನು ನೋವು, ಚಳಿ, ನಡುಕ, ವಾಂತಿ, ಅಸ್ವಸ್ಥತೆ, ಕಣ್ಣು ಕೆಂಪಾಗುವುದು, ದೌರ್ಬಲ್ಯ & ದೇಹ ಸೊರಗು, ಹೊಟ್ಟೆ ನೋವಾಗುವಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ರಾಜ್ಯದಲ್ಲಿ ಲೆಸ್ಟೋಸ್ಟೈರೋಸಿಸ್ ಸೋಂಕಿನ ಪ್ರಕರಣಗಳು ಕಳೆದ 5 ವರ್ಷಗಳಲ್ಲಿ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿವೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ 16 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 30 ಮಂದಿ ಮೃತಪಟ್ಟಿದ್ದಾರೆ. ಪ್ರತಿ ವರ್ಷವೂ ಪ್ರಕರಣಗಳ ಸಂಖ್ಯೆ ಏರಿದೆ. * 2020-544, *2021-906, *2022-3,174, *2023-5,404, *2024-5,088, 2025ರಲ್ಲಿ 6,525 ಪ್ರಕರಣಗಳು ದಾಖಲಾಗಿದೆ. ಕಳೆದ ವರ್ಷ 19 ಮಂದಿ ಈ ಸೋಂಕಿನಿಂದ ಮೃತಪಟ್ಟಿದ್ದಾರೆ.




