
ಸಕಲೇಶಪುರ – ಸಕಲೇಶಪುರ ಗ್ರಾಮಾಂತರ ಹಾಗೂ ನಗರ ಠಾಣೆಗಳಲ್ಲಿ ನಿರಂತರವಾಗಿ ಅಕ್ರಮ ಗೋಸಾಗಾಟ – ಗೋಮಾಂಸ ಮಾರಾಟ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ.
ಬೆಳ್ಳಂಬೆಳಗ್ಗೆ ಬಕ್ರಿದ್ ಹಬ್ಬದ ಹಿನ್ನೆಲೆ ಕಾರ್ಯಾಚರಣೆಯಲ್ಲಿದ್ದ ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾನುಬಾಳ್ ಭಾಗದಿಂದ ಬರುತ್ತಿದ್ದ Ka42b4431 ಅಶೋಕ್ ಲೆಯ್ಲಂಡ್ ವಾಹನವನ್ನು ಬೆನ್ನಟ್ಟಿ ನಗರ ಠಾಣೆಯ ವ್ಯಾಪ್ತಿಯ ಕೆಂಪೆಗೌಡ ಪುತ್ತಳಿಯ ವೃತ್ತದ ಬಳಿ ವಾಹನವನ್ನು ತಡೆಯಲು ಯಶಸ್ವಿಯಾಗಿದ್ದು, ಅಶೋಕ್ ಲೆಯ್ಲಂಡ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ 6 ಗೋವುಗಳನ್ನು ಅಕ್ರಮವಾಗಿ ತುಂಬಲಾಗಿದ್ದು ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಾರ್ಯಪ್ರವೃತ್ತರಾದ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಶೋಕ್ ಲೆಯ್ಲಂಡ್ ವಾಹನವನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.