ಬೆಳ್ತಂಗಡಿ: ದೇವಸ್ಥಾನಕ್ಕೆ ಹೋಗುವ ಸಾರ್ವಜನಿಕ ರಸ್ತೆಯ ಬಳಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾಗ ವೇಣೂರು ಪೊಲೀಸರು ದಾಳಿ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕು ಮೂಡಕೋಡಿ ಗ್ರಾಮದಲ್ಲಿ ನಡೆದಿದೆ.
ದಿನಾಂಕ: 27.03.2024ರಂದು ಸಂಜೆ, ಬೆಳ್ತಂಗಡಿ ತಾಲೂಕು ಮೂಡಕೋಡಿ ಗ್ರಾಮದ ಉಮಾಮಹೇಶ್ವರಿ ದೇವಸ್ಥಾನಕ್ಕೆ ಹೋಗುವ ಸಾರ್ವಜನಿಕ ರಸ್ತೆಯ ಬಳಿ, ಆರೋಪಿಯಾದ ಮೂಡುಕೋಡಿ ಗ್ರಾಮ, ಬೆಳ್ತಂಗಡಿ ನಿವಾಸಿ ಶೇಖರ ಶೆಟ್ಟಿ ಎಂಬಾತನು ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾಗ, ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಆನಂದ ಎಂ ರವರು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ 1469/- ರೂ ಮೌಲ್ಯದ, ತಲಾ 180 ಎಂ.ಎಲ್. ಮದ್ಯ ತುಂಬಿದ 17 ಸ್ಯಾಚೆಟ್ ಗಳು ಹಾಗೂ ತಲಾ 90 ಎಂ, ಎಲ್.ಮದ್ಯ ತುಂಬಿದ 07 ಸ್ಯಾಚೆಟ್ ಗಳನ್ನು(3.690 ಲೀಟರ್ ಮದ್ಯ) ವಶಪಡಿಸಿ, ಮುಂದಿನ ಕಾನೂನು ಕ್ರಮಕ್ಕಾಗಿ ವೇಣೂರು ಪೊಲೀಸ್ ಠಾಣೆಯಲ್ಲಿ 30/2024 ಕಲಂ: 32, 34 ಅಬಕಾರಿ ಕಾಯ್ದೆ-1965ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.