ನಾರಾಯಣ ಗುರುಗಳ ಸಂದೇಶವನ್ನು ನಮ್ಮನಮ್ಮ ಜೀವನದಲ್ಲಿ ಅನುಷ್ಠಾನ ಮಾಡುವುದೇ ಗುರುಗಳಿಗೆ ಮಾಡುವ ನಿಜವಾದ ಪೂಜೆ

Share with

ಬಂಟ್ವಾಳ : ನಾರಾಯಣ ಗುರುಗಳ ಸಂದೇಶವನ್ನು ನಮ್ಮನಮ್ಮ ಜೀವನದಲ್ಲಿ ಅನುಷ್ಠಾನ ಮಾಡುವುದೇ ಗುರುಗಳಿಗೆ ಮಾಡುವ ನಿಜವಾದ ಪೂಜೆ ಎಂದು ಯುವವಾಹಿನಿ( ರಿ.) ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ರಿ. ಬಂಟ್ವಾಳ ಘಟಕದ ಆಶ್ರಯದಲ್ಲಿ ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನದ ಅಂಗವಾಗಿ ಕ್ರೀಡಾ ನಿರ್ದೇಶಕ ಮಧುಸೂಧನ್ ಮಧ್ವ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ ೨ ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷ ನಾರಾಯಣ ಪಲ್ಲಿಕಂಡ, ಮಾಜಿ ಅಧ್ಯಕ್ಷರಾದ ಪ್ರೇಮನಾಥ, ಶಿವಾನಂದ ಹಾಗೂ ಪದಾಧಿಕಾರಿಗಳಾದ ಕಿರಣ್ ರಾಜ್ ಪೂಂಜೆರೆಕೋಡಿ, ಧನುಷ್ ಮಧ್ವ, ಪುರುಷೊತ್ತಮ ಕಾಯರಪಲ್ಕೆ, ಮಹೇಶ್ ಬೊಳ್ಳಾಯಿ, ಉದಯ್ ಮೇನಾಡು, ಸುನೀಲ್ ರಾಯಿ, ಸದಸ್ಯರಾದ ಪ್ರಶಾಂತ್ ಶಾಂತಿ, ನಾಗೇಶ್ ಏಲಬೆ, ಹರೀಶ್ ಅಜಕಳ, ಹಸ್ತ್ ರಾಯಿ, ಶ್ರವಣ್ ಬಿಸಿರೋಡ್, ವಿಘ್ನೇಶ್ ಬೊಳ್ಳಾಯಿ , ಸಹನಾ ಮಧ್ವ ಮೊದಲದವರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *