ಹೆಚ್ಚಾಗುತ್ತಲೇ ಇದೆ ಎಚ್‌ಡಿಕೆ ಅಂತರ. ಹೈವೋಲ್ವೇಜ್ ಕಣವಾಗಿರುವ ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭಾರೀ ಅಂತರದಿಂದ ಮುನ್ನುಗ್ಗುತ್ತಿದ್ದಾರೆ. ಐದನೇ ಹಂತದ ಮತ ಎಣಿಕೆಯ ನಂತರದಲ್ಲಿ 54,668 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಜೆಡಿಎಸ್- ಬಿಜೆಪಿಯ ಮೈತ್ರಿ ಅಭ್ಯರ್ಥಿಯ ಎದುರು ಆರಂಭಿಕವಾಗಿ ಮಂಕಾಗಿದ್ದಾರೆ.