ಮಂಜೇಶ್ವರ: ಆಲ್ ಕೇರಳ ಪೊಟೋಗ್ರಾಫರ್ಸ್ ಅಸೋಸಿಯೇಶನ್ ಕುಂಬಳೆ ವಲಯದ ಗುರುತು ಚೀಟಿ ವಿತರಣೆಯ ಉದ್ಘಾಟನೆ ಹಾಗೂ ಸಂಘಟನೆಯ ತರಬೇತಿ ಸಮಾರಂಭ ಏ.1ರಂದು ಸಂಜೆ ಹೊಸಂಗಡಿಯ ಗೇಟ್‌ವೇ ಅಡಿಟೋರಿಯಂನಲ್ಲಿ ನಡೆಯಿತು.
ವಲಯ ಅಧ್ಯಕ್ಷ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷ ಕೆ.ಸಿ ಅಬ್ರಾಹಮ್ ಗುರುತು ಚೀಟಿ ವಿತರಣೆಯ ಉದ್ಘಾಟನೆಯನ್ನು ನೆರವೇರಿಸಿ ಸಾಂತ್ವಾನ ಪದ್ದತಿಯ ಮಹತ್ವನ್ನು ಹೇಳಿದರು.
ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ಸಂಘಟನೆಯ ತರಗತಿಯನ್ನು ನಡೆಸಿದರು. ಸಂಘಟನೆಯ ಜಿಲ್ಲಾ ಇನ್ಸೂರೆನ್ಸ್ ಕೋಡಿನೇಟರ್ ಅಶೋಕ್ ಪೊಯಿನಾಚಿ ರವರು ಇನ್ಸೂರೆನ್ಸ್ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಕೋಶಾಧಿಕಾರಿ ಸುನಿಲ್ ಕುಮಾರ್.ಪಿ.ಟಿ, ಜಿಲ್ಲಾ ಉಪಾಧ್ಯಾಕ್ಷ ವೇಣು.ವಿ.ವಿ, ಜಿಲ್ಲಾ ಜತೆ ಕಾರ್ಯದರ್ಶಿ ರಾಜೇಂದ್ರನ್‌ಮಾತನಾಡಿದರು.
ಜಿಲ್ಲಾ ಸಮಿತಿ ಸದಸ್ಯ ವೇಣು ಗೋಪಾಲ್ ನೀರ್ಚಾಲ್ ಪ್ರಾರ್ಥನೆ ಹಾಡಿದರು. ಕುಂಬಳೆ ವಲಯ ಕಾರ್ಯದರ್ಶಿ ನಿತ್ಯಪ್ರಸಾದ್ ಸ್ವಾಗತಿಸಿ, ಉಪಾಧ್ಯಾಕ್ಷ ಅಪ್ಪಣ್ಣ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ, ವಲಯ, ಯೂನಿಟ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.