ಅಕ್ಷಯ ಕಾಲೇಜಿನಲ್ಲಿ “ಸ್ಪೋಕನ್ ಇಂಗ್ಲೀಷ್”  ತರಗತಿಗಳ  ಉದ್ಘಾಟನಾ ಸಮಾರಂಭ

Share with


  ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ   ಇಂಗ್ಲೀಷ್  ವಿಭಾಗ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ    ಸಹಭಾಗಿತ್ವದಲ್ಲಿ     ವಿದ್ಯಾರ್ಥಿಗಳಿಗೆ   “ಸ್ಪೋಕನ್ ಇಂಗ್ಲೀಷ್”  ತರಗತಿಗಳ  ಉದ್ಘಾಟನಾ ಸಮಾರಂಭ   ನಡೆಯಿತು.
ಕಾರ್ಯಕ್ರಮ ವನ್ನು  ಎನ್ ಎಂ  ಸಿ   ಕಾಲೇಜ್  ಸುಳ್ಯ  ಇದರ ಪ್ರಾಂಶುಪಾಲರಾದ  ಮಿಥಾಲಿ ಪಿ ರೈ   ಉದ್ಘಾಟಿಸಿ  ಭಾರತದ  ರಾಷ್ಟ್ರ  ಭಾಷೆ  ಹಿಂದಿಯಾದರು,  ರಾಷ್ಟ್ರೀಯ ಮತ್ತು  ಅಂತರರಾಷ್ಟ್ರೀಯ ಮಟ್ಟದಲ್ಲಿ  ವ್ಯಾಪಕವಾಗಿ  ಬಳಸಲ್ಪಡುವ  ಭಾಷೆಯು   ಇಂಗ್ಲೀಷ್  ಆಗಿದೆ.  ಈ ನಿಟ್ಟಿನಲ್ಲಿ ನಮ್ಮ ಮಾತೃ  ಭಾಷೆಯ  ರೀತಿ ಸರಳವಾಗಿ  ಇಂಗ್ಲೀಷ್ ಮಾತನಾಡಲು  ಕಲಿಯುವುದು ಅತೀ ಅಗತ್ಯ. ಭಾಷೆಯನ್ನು ನಿರಂತರವಾಗಿ ಕೇಳುವುದರಿಂದ,ಬರೆಯುವುದರಿಂದ , ಓದುವುದರಿಂದ ಮತ್ತು ಮಾತನಾಡುವುದರಿಂದ  ಕಲಿಯಬಹುದು . ಬಹು ಭಾಷೆಯ ಮೇಲಿನ ಹಿಡಿತವು  ವ್ಯಾವಹಾರಿಕ ಮತ್ತು  ಉದ್ಯೋಗ  ದೃಷ್ಟಿಯಿಂದ  ಪ್ರಸ್ತುತ ಸನ್ನಿವೇಶದಲ್ಲಿ ಅನಿವಾರ್ಯ.  ಪ್ರಸ್ತುತ ವಿದ್ಯಾರ್ಥಿಗಳಿಗೆ  ತಮ್ಮ  ಪದವಿ ಶಿಕ್ಷಣದೊಂದಿಗೆ  ಸರಳವಾಗಿ  ಇಂಗ್ಲೀಷ್ ಮಾತನಾಡಲು ಕಲಿಯುವ ಅವಕಾಶ  ವನ್ನು  ಉಚಿತವಾಗಿ ಪ್ರತ್ಯೇಕ  ತರಗತಿಗಳ  ಮೂಲಕ ನೀಡುತ್ತಿರುವುದು  ಔಚಿತ್ಯ ಮತ್ತು ಶ್ಲಾಘನೀಯ  ಎಂದು  ಮೆಚ್ಚುಗೆ ವ್ಯಕ್ತಪಡಿಸಿದರು .


ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿ ಮಾತನಾಡಿದ  ಪ್ರಾಂಶುಪಾಲರಾದ  ಶ್ರೀ ಸಂಪತ್ ಕೆ ಪಕ್ಕಳ ರವರು,  ವಿದ್ಯಾರ್ಥಿಗಳಿಗೆ ತಮ್ಮ  ಶಿಕ್ಷಣದ
ಜೊತೆಗೆ  ಸರಳವಾಗಿ ಮತ್ತು ಸುಲಭ  ರೀತಿಯಲ್ಲಿ ಇಂಗ್ಲೀಷ್ ಮಾತನಾಡಲು  ಅವಕಾಶ ವನ್ನು  ಕಲ್ಪಿಸಲಾಗಿದೆ.ಲಭ್ಯವಾಗುವುವ   ಅವಕಾಶಗಳನ್ನು   ಬಳಸಿಕೊಂಡು  ಸಂವಹನ ತೊಡಕುಗಳನ್ನು ನಿವಾರಿಸಿ  ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ   ಪಡೆಯಬೇಕು  ಎಂದು  ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ ಎ ಉಪಸ್ಥಿತರಿದ್ದರು .   ಇಂಗ್ಲಿಷ್ ವಿಭಾಗದ  ಮುಖ್ಯಸ್ಥೆ ಯಾದ   ಶ್ರೀಮತಿ  ರಶ್ಮಿ ಪ್ರಾಸ್ತಾವಿಕವಾಗಿ ಭಾಷಣ ಮಾಡಿ ಅತಿಥಿಗಳನ್ನು  ಸ್ವಾಗತಿಸಿದರು.  ವಿಭಾಗದ  ಉಪನ್ಯಾಸಕಿ ಶ್ರೀಮತಿ  ದೀಪ್ತಿ  ಎ ಸಿ  ಸಂಚಾಲಕರು  ಇಂಗ್ಲೀಷ್  ಸಂಘ  ಅವರು ಉದ್ಘಾಟಕರ  ಕಿರು ಪರಿಚಯ  ನೀಡಿದರು. ದ್ವಿತೀಯ ಫ್ಯಾಷನ್ ಡಿಸೈನ್ ವಿಭಾಗದ ವಿದ್ಯಾರ್ಥಿನಿಯಾರಾದ  ಕುಮಾರಿ ಪ್ರಕೃತಿ ಪ್ರಾರ್ಥನೆ  ಹಾಡಿ , ಜೆನ್ನಿಫರ್ ಡಿ  ಸೋಜ  ಧನ್ಯವಾದ ಮಾಡಿ  ಮತ್ತು  ಹಲಿಮತ್ ಮುಖ್ಸಾನಾ  ಕಾರ್ಯಕ್ರಮ ನಿರೂಪಿಸಿದರು


Share with

Leave a Reply

Your email address will not be published. Required fields are marked *