ಏತಡ್ಕ : ಕುಂಬಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯ ಏತಡ್ಕದ ಹಿರಿಯ ನಾಗರಿಕರ ವೇದಿಕೆಯನ್ನು ಸೋಮವಾರ (ಇಂದು) ಸಮಾಜ ಮಂದಿರ ಏತಡ್ಕದಲ್ಲಿ ಕಾಸರಗೋಡು ತಾಲೂಕು ಗ್ರಂಥಾಲಯ ಪರಿಷತ್ತಿನ ಅಧ್ಯಕ್ಷ ಇ.ಜನಾರ್ದನನ್ ಉದ್ಘಾಟಿಸಿ ಮಾತನಾಡಿದರು. ಗ್ರಂಥಾಲಯದ ಅಧ್ಯಕ್ಷ ವೈ ಕೆ ಗಣಪತಿ ಭಟ್, ಕಾರ್ಯದರ್ಶಿ ಗಣರಾಜ ಕೆ ಏತಡ್ಕ , ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಉದಯಶಂಕರ ಭಟ್ ಸಿ, ಕಾರ್ಯದರ್ಶಿ ನರಸಿಂಹ ಭಟ್ ಕಟ್ಟದಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.