ಅತ್ಯಾಧುನಿಕ ಸೌಕರ್ಯದ ಹೊಸ ಶವಾಗಾರ ಕಟ್ಟಡ ಉದ್ಘಾಟನೆ

Share with

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಗಾಗಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ನಿರ್ಮಿಸಲಾಗಿರುವ ಹೊಸ ಶವಾಗಾರ ಕಟ್ಟಡವನ್ನು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿದರು. ಎನ್.ಎ. ನೆಲ್ಲಿಕುನ್ನು ರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ 1.20 ಕೋಟಿ ರೂ. ವ್ಯಯಿಸಿ ಈ ಕಟ್ಟಡ ನಿರ್ಮಿಸಲಾಗಿದೆ. ಇದು ಆಧುನಿಕ ಸೌಕರ್ಯವನ್ನು ಹೊಂದಿದೆ. ಹೆಚ್ಚುವರಿ ಮೃತದೇಹಗಳನ್ನು ಸಂರಕ್ಷಿಸಿಡುವ ಹೆಚ್ಚುವರಿ ಫ್ರೀಜರ್ ಸೌಕರ್ಯಗಳು, ಉನ್ನತ ಮಟ್ಟದ ಮರಣೋತ್ತರ ಪರೀಕ್ಷಾ ಸೌಕರ್ಯ, ಅದಕ್ಕೆ ಹೊಂದಿಕೊಂಡು ಪೀಠೋಪ ಕರಣ ಹಾಗೂ ಅಗತ್ಯದ ಕೊಠಡಿ ಸೌಕರ್ಯಗಳೂ ಇದರಲ್ಲಿ ಹೊಂ ದಿದೆ. ಅಲ್ಲದೇ ದೈನಂದಿನ 24 ತಾಸುಗಳಲ್ಲೂ ಮರಣೋತ್ತರ ಪರೀಕ್ಷೆ ನಡೆಸುವ ರಾಜ್ಯದ ಏಕೈಕ ಆಸ್ಪತ್ರೆಯೂ ಆಗಿದೆ. ಈ ವೇಳೆ ನಗರಸಭಾ ಉಪಾಧ್ಯಕ್ಷ ಕೆ.ಎಂ. ಹನೀಫ, ಉಪಜಿಲ್ಲಾ ವೈದ್ಯಾಧಿಕಾರಿ ಡಾ| ಡಿ. ಸಂತೋಷ್ ಸೇರಿದಂತೆ ಹಲವರು ಭಾಗವಹಿಸಿದರು.


Share with

Leave a Reply

Your email address will not be published. Required fields are marked *