ಬಂಟ್ವಾಳ: ಸಹಕಾರಿಯ ಬೆಳವಣಿಗೆಯಲ್ಲಿ ಗ್ರಾಹಕರಿಗೂ ತರಬೇತಿ ನೀಡಬೇಕು. ಮೂರ್ತೆದಾರರ ಕುಲಕಸಬು ವ್ಯವಸ್ಥೆಗೆ ಪರ್ಯಾಯವಾಗಿ ಬ್ಯಾಂಕಿಂಗ್ ವ್ಯವಹಾರ ಸಮಾಜದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಾಗಿದೆ ಎಂದು ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮಿಜಿ ಹೇಳಿದರು.
ಅವರು ಮಾ.31ರಂದು ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 14 ನೇ ಶಾಖೆಯನ್ನು ಬಿ. ಸಿ. ರೋಡ್ ಜಿ.ಕೆ ಸ್ಮಾರ್ಟ್ ಸಿಟಿ ಕಟ್ಟಡದ ಪ್ರಥಮ ಮಹಡಿಯಲ್ಲಿ ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು.
ನಾರಾಯಣ ಗುರುಗಳ ಚಿಂತನೆಯಂತೆ ಸಹಕಾರಿ ವ್ಯವಸ್ಥೆ ಬೆಳೆದಿದೆ. ಸಾಲ ಪಡೆಯುವ ಫಲಾನುಭವಿಯ ಸಾಮರ್ಥ್ಯಕ್ಕೆ ತಕ್ಕಂತೆ ಸಾಲ ನೀಡಬೇಕು. ಸುಲಭ ಕಂತಿನಲ್ಲಿ ಮರು ಪಾವತಿಗೆ ಅವಕಾಶ ಆಗಬೇಕು. ಸಹಕಾರಿಯ ಬೆಳವಣಿಗೆಯಲ್ಲಿ ಗ್ರಾಹಕರಿಗೆ ಬಹು ವ್ಯವಹಾರದ ತರಬೇತಿ ವ್ಯವಸ್ಥೆ ಆದಾಗ ಒಂದಲ್ಲ ಒಂದು ವ್ಯವಹಾರದಲ್ಲಿ ಲಾಭ ಆಗುವುದು ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಮೂರ್ತೆದಾರರ ಎಲ್ಲಾ ಶಾಖೆಗಳ ಉದ್ಘಾಟನೆಯಲ್ಲಿ ನಾನು ಖಾಯಂ ಆಹ್ವಾನಿತನಾಗಿದ್ದೇನೆ.
ಮೂರ್ತೆದಾರಿಕೆ ಕಸುಬಿಗೆ ಪರ್ಯಾಯವಾಗಿ ಸಹಕಾರಿ ಸಂಘವು ಆರಂಭವಾಗಿತ್ತು.
ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆಯಂತೆ ಮೂರ್ತೆದಾರರ ಸಹಕಾರಿಯು ಜನತೆಗೆ ಶಕ್ತಿ ನೀಡುವ ಕೆಲಸ ಮಾಡಿದೆ ಎಂದರು.
ಸಹಕಾರಿಯ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಮಾತನಾಡಿ ನಮ್ಮ ಸಹಕಾರಿಯು ಶೇ.98 ಸಾಲ ವಸೂಲಾತಿ ಸಾಧನೆ ಮಾಡಿದೆ. ತಾಲೂಕು ಕೇಂದ್ರದಲ್ಲಿ ಈ ಶಾಖೆ ಆರಂಭವಾಗಿದೆ. ಮುಂದಿನ ಶಾಖೆ ವೇಣೂರಿನಲ್ಲಿ ಆಗಲಿದೆ.
ಮೂರ್ತೆದಾರಿಕೆ ಉದ್ಯೋಗಕ್ಕೆ ಸಮಸ್ಯೆ ಎದುರಾದಾಗ ಈ ಸಂಸ್ಥೆ ಹುಟ್ಟಿಕೊಂಡು 41ಕ್ಕೂ ಅಧಿಕ ಮಹಿಳಾ ಸಿಬಂದಿಗಳಿಗೆ ಉದ್ಯೋಗ ನೀಡಿದೆ ಎಂದರು.
ಬ್ರಹ್ಮ ಶ್ರೀ ನಾರಾಯಣ ಗುರುಗಳ ಸಂದೇಶವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ನಾನು ಮೂರ್ತೆದಾರರ ಮಹಾಮಂಡಲ ಸಹಕಾರಿಯ ಅಧ್ಯಕ್ಷ ನಾಗಿ ಅದನ್ನೂ ಲಾಭದ ಹಂತದಲ್ಲಿ ಮುನ್ನಡೆಸಿಕೊಂಡು ಬಂದಿದ್ದಾಗಿ ತಿಳಿಸಿದರು.
ಬಿ. ಸಿ. ರೋಡ್ ಶ್ರೀ ಅನ್ನ ಪೂರ್ಣೇಶ್ವರಿ ದೇವಸ್ಥಾನದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಠೇವಣಿ ಪತ್ರ ಬಿಡುಗಡೆ ಮಾಡಿ ಬಳಿಕ ಮಾತನಾಡಿ ಸಂಸ್ಥೆ ಯಶಶ್ವಿ ಮುನ್ನಡೆಯಲಿ ಎಂದರು.
ಬಂಟ್ಟಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಬಿ. ಸಂಜೀವ ಪೂಜಾರಿ ಗುರುಕೃಪಾ ಮಾತನಾಡಿ ಶಾಖೆ ತೆರೆಯುವುದು ಸುಲಭ ಅಲ್ಲ. ನಿರ್ದೇಶಕರ ಸಹಾಯ, ಸಿಬಂದಿಗಳ ಶ್ರಮ ಅವಶ್ಯ, ಸಿಬಂದಿಗಳು ಸೇವೆ ಮಾಡುವಾಗ ಮನಪೂರ್ವಕ ನಗುಮುಖದ ಕೆಲಸ ಮಾಡಿ ಎಂದು ಹಾರೈಸಿದರು.
ಭೂ ಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್ ಡಿಸೋಜ ಮಾತನಾಡಿ ಸಗ್ರಾಹಕ ಸೇವೆಯಲ್ಲಿ ಸಹಕಾರಿ ಮಾರ್ಗದರ್ಶಿಯಾಗಿದೆ.
ಈ ಬ್ಯಾಂಕಿನ ಅಧ್ಯಕ್ಷರಿಗೆ ಹಿರಿಯರ ಪರಂಪರೆ ಇದೆ . ಅವರು ಸವ್ಯಸಾಚಿ.
ಮೂರ್ತೆದಾರಿಕೆ ಕುಲಕಸುಬನ್ನು ಒಂದು ಬ್ರಾಂಡ್ ಮಾಡಿದ್ದು ಸಂಸ್ಥೆ ಯಶಶ್ವಿಯಾಗಲಿ ಎಂದರು.
ವೇದಿಕೆಯಲ್ಲಿ ಬಿ. ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಸ್ಥಾನದ ಅಧ್ಯಕ್ಷ
ಬಿ. ವಿಶ್ವನಾಥ ಪೂಜಾರಿ, ಬುಡಾ ಅಧ್ಯಕ್ಷ ಬೇಬಿ ಕುಂದರ್,
ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು ನಿರ್ದೇಶಕರಾದ ಜಯಶಂಕರ ಕಾನ್ಸಾಲೆ, ರಮೇಶ ಅನ್ನ ಪ್ಪಾಡಿ, ವಿಠಲ ಬೆಳ್ಚಾಡ ಚೇಳೂರು, ಅಶೋಕ ಕುಮಾರ್ ಕೋಮಾಲಿ, ಗಿರೀಶ್ ಕುಮಾರ್ ಪೆರ್ವ, ಕೆ. ಸುಜಾತ ಎಂ., ವಾಣಿ ವಸಂತ್, ಆರುಣ್ ಕುಮಾರ್ ಎಂ. , ಆಶಿಶ್ ಪೂಜಾರಿ , ಶಾಖಾಧಿಕಾರಿ ಶ್ರುತಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತ ಜಿ. ಸ್ವಾಗತಿಸಿ, ಸಿಬಂದಿ ವಿಜಯ ಕೆ. ವಂದಿಸಿದರು.
ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.