ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಓಂಕಾರ್ ಫ್ರೆಂಡ್ಸ್ ವೀರಕಂಭ ಸಂಘಟನೆಯ ವತಿಯಿಂದ ವೀರಕಂಭ ಅಂಚೆ ಕಚೇರಿಯ ಎದುರು ನಿರ್ಮಿಸಲ್ಪಟ್ಟ ತಂಗುದಾಣದ ಲೋಕಾರ್ಪಣೆಯನ್ನು ವೀರಕಂಭ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ ನೆರವೇರಿಸಿದರು.
ಈ ಹಿಂದೆ ಇದ್ದ ತಂಗುದಾನವು ರಸ್ತೆ ಅಗಲೀಕರಣವಾಗುವಾಗ ತೆರವಾಗಿದ್ದು ಶಾಲಾ ಮಕ್ಕಳು, ಸಾರ್ವಜನಿಕರು, ಬಿಸಿಲು ಮಳೆಗೆ ರಸ್ತೆ ಬದಿಯಲ್ಲಿ ನಿಂತಿರುವುದನ್ನು ಕಂಡು ಸ್ಥಳೀಯ ಸಂಘಟನೆಯಾದ ಓಂಕಾರ್ ಫ್ರೆಂಡ್ಸ್ ತಂಗುದಾನವನ್ನು ನಿರ್ಮಿಸಿ ಕೊಟ್ಟಿದೆ.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ಪ್ರಭು, ಯುವಶಕ್ತಿ ಫ್ರೆಂಡ್ಸ್ ನ ಅಧ್ಯಕ್ಷ ಜಗದೀಶ್ ಹಾಗೂ ಸದಸ್ಯರುಗಳು, ಓಂಕಾರ್ ಫ್ರೆಂಡ್ಸ್ ಸಂಘಟನೆಯ ಅಧ್ಯಕ್ಷ ಕೀರ್ತನ್, ಮಾಜಿ ಅಧ್ಯಕ್ಷ ವಾಸು ನಾಯ್ಕ್, ಕಾರ್ಯದರ್ಶಿ ಪ್ರವೀಣ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.