ಬಂಟ್ವಾಳ: ಬಾಲಕಿಯನ್ನು ಅಪ್ಪಿ ಹಿಡಿದು ಅನುಚಿತವಾಗಿ ವರ್ತಿಸಿದ ಘಟನೆಯು ಎ. 24ರಂದು ಪೊಳಲಿ ಯಲ್ಲಿ ನಡೆದಿದ್ದು, ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಡಕಬೈಲು ನಿವಾಸಿ ಅಮೀನ್ ಯಾನೆ ಮೊಹಮ್ಮದ್ ಅಮೀನ್ ಪ್ರಕರಣ ಆರೋಪಿಯಾಗಿದ್ದು, ಆತ ಬಾಲಕಿಯ ಹಿಂದಿನಿಂದ ಬಂದು ಜೋರಾಗಿ ಎದೆ ಭಾಗವನ್ನು ಅಪ್ಪಿ, ಕೈಯನ್ನು ಬಲವಾಗಿ ಹಿಡಿದು ತಿರುಗಿ ನೋಡಲು ಕೂಡ ಅವಕಾಶ ನೀಡದೆ ನಿನ್ನ ಮೊಬೈಲ್ ನಂಬರ್ ಕೊಡಬೇಕು, ಇಲ್ಲದಿದ್ದರೇ ನಿನ್ನನ್ನು ರೇಪ್ ಮಾಡದೇ ಬಿಡುವುದಿಲ್ಲ, ನೀನು ನನಗೆ ಬೇಕು ಎಂದು ಹೇಳಿದಾಗ ನೊಂದ ಬಾಲಕಿಯು ಬೊಬ್ಬೆ ಹಾಕಿದ್ದಾಳೆ.
ಈ ವೇಳೆ ಸಂಬಂಧಿಕನೋರ್ವ ಬರುವುದನ್ನು ನೋಡಿ ಆರೋಪಿಯು ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ.
ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ತನಿಖೆ ನಡೆಸುತ್ತಿದ್ದಾರೆ.