ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ

Share with

ಚಾಂಪಿಯನ್ಸ್ ಟ್ರೋಫಿಯ ಇಂದಿನ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ.

ಪಾಕಿಸ್ತಾನ ನೀಡಿದ್ದ 242 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 42.3 ಓವರ್‌ಗಳಲ್ಲೇ 244 ರನ್‌ಳಿಸಿ 6 ವಿಕೆಟ್‌ಗಳ ಅಂತರದಲ್ಲಿ ಗೆದ್ದು ಬೀಗಿತು. ಟೀಂ ಇಂಡಿಯಾ ಗೆಲುವಿನಲ್ಲಿ ಕೊಹ್ಲಿ (100)*, ಶ್ರೇಯಸ್ ಐಯ್ಯರ್ (56) ಹಾಗೂ ಗಿಲ್ (46) ರನ್‌ಗಳ ಕೊಡುಗೆ ನೀಡಿದರು. ಪಾಕ್ ಪರ ಶಾಹಿನ್ ಅಫ್ರೀದಿ 2 ವಿಕೆಟ್ ಪಡೆದರು.

ಕಿಂಗ್ ಕೊಹ್ಲಿ ಭರ್ಜರಿ ಶತಕ

ಚಾಂಪಿಯನ್ಸ್. ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ.

ಆರಂಭದಿಂದಲೇ ಅದ್ಭುತವಾಗಿ ಆಡಿದ ಕಿಂಗ್ ಕೊಹ್ಲಿ ಪಾಕ್ ವಿರುದ್ಧ 111 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ತಮ್ಮ ಏಕದಿನ ಮಾದರಿಯಲ್ಲಿ 14,000 ರನ್‌ಗಳನ್ನು ಪೂರೈಸಿದ ದಾಖಲೆ ಬರೆದರು.


Share with