
ವಿಶಾಖಪಟ್ಟಣದಲ್ಲಿ ನಡೆದ 4ನೇ T20 ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ಧ 50 ರನ್‌ಗಳಿಂದ ಸೋಲು ಅನುಭವಿಸಿದೆ.

ಕಿವಿಸ್ ಪಡೆ ನೀಡಿದ್ದ 216 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 18.4 ಓವರ್‌ನಲ್ಲಿ 165 ರನ್‌ಗಳಿಗೆ ಆಲೌಟ್ ಆಗುವುದರ ಮೂಲಕ 50 ರನ್ ಗಳಿಂದ ಸೋತಿದೆ. ಭಾರತದ ಪರ ದುಬೆ 65, ರಿಂಕು 39 ರನ್‌ಗಳಿಸಿ ಮಿಂಚಿದರು. ಕಿವಿಸ್ ಪರ ಸ್ಯಾಂಟ್ನರ್ 3 ವಿಕೆಟ್, ಸೋಧಿ & ಡಫಿ ತಲಾ 2 ವಿಕೆಟ್‌ಗಳನ್ನು ಪಡೆದರು. ಈ ಸರಣಿಯಲ್ಲಿ ನ್ಯೂಜಿಲೆಂಡ್ ಮೊದಲ ಗೆಲುವು ಕಂಡಿದೆ.




