ಇರಾನ್ ಮೇಲೆ ಇಸ್ರೇಲ್ & USನ ದಾಳಿ ಇನ್ನೂ ನಿಂತಿಲ್ಲ. ಇರಾನ್ ಕೂಡ ಪ್ರತಿ ದಾಳಿ ನಡೆಸುವುದನ್ನು ನಿಲ್ಲಿಸಿಲ್ಲ. ಈ ಯುದ್ಧದಲ್ಲಿ ಇಸ್ರೇಲ್ & ಇರಾನ್ ಅಕ್ಷರಶಃ ಸ್ಮಶಾನದಂತಾಗಿದೆ. ಇದೀಗ ಭಾರತ ಇರಾನ್‌ಗೆ ವೈದ್ಯಕೀಯ ನೆರವು ನೀಡಿದೆ. ಯುದ್ದದಿಂದ ಕಂಗೆಟ್ಟಿರುವ ಇರಾನ್‌ಗೆ ಭಾರತವು ಅಗತ್ಯ ವೈದ್ಯಕೀಯ ಸಾಮಗ್ರಿಗಳ ಕಿಟ್‌ಗಳನ್ನು ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿಗೆ ತಲುಪಿಸಿದೆ. ಇದು ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತ ತೆಗೆದುಕೊಂಡ ಮಾನವೀಯತೆಯ ನಿರ್ಧಾರವಾಗಿದೆ.





