ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯ ಗೆಲ್ಲುವ ಮೂಲಕ ಟೀಂ ಇಂಡಿಯಾ ಇಂದು ವಿಶ್ವ ದಾಖಲೆ ಬರೆದಿದೆ. ಈಗಾಗಲೇ ಟೆಸ್ಟ್ ಮತ್ತು ಟಿ20ಯಲ್ಲಿ ನಂಬರ್ 1 ಆಗಿರುವ ಭಾರತ ತಂಡ ಈಗ ಏಕದಿನ ಕ್ರಿಕೆಟ್‌ನಲ್ಲೂ ಅಗ್ರ ಸ್ಥಾನಕ್ಕೇರಿದೆ.
ಇಷ್ಟು ದಿನ ಟಾಪ್‌ನಲ್ಲಿದ್ದ ಸಾಂಪ್ರದಾಯಿಕ ವೈರಿ ಪಾಕಿಸ್ತಾನವನ್ನು ಕೆಳಗೆ ತಳ್ಳಿದ ಟೀಂ ಇಂಡಿಯಾ ನಂ ಒನ್ ಸ್ಥಾನದಲ್ಲಿ ವಿರಾಜಮಾನವಾಗಿದೆ. 2014ರಲ್ಲಿ, ದಕ್ಷಿಣ ಆಫ್ರಿಕಾ ಮಾತ್ರ ಎಲ್ಲಾ ಮೂರು ಸ್ವರೂಪಗಳಲ್ಲೂ ನಂಬರ್ ಒನ್ ಆಗಿತ್ತು.