3ನೇ ವಾರಕ್ಕೆ ಕಾಲಿಟ್ಟಿರುವ ಇರಾನ್-US, ಇಸ್ರೇಲ್ ಯುದ್ಧವನ್ನು ನಿಲ್ಲಿಸಲು ಯತ್ನಿಸುವಂತೆ ಹಾಗೂ ಅಮೆರಿಕ & ಇರಾನ್ ಮಧ್ಯೆ ಶಾಂತಿ ಏರ್ಪಡಿಸಿ, ಬಿಕ್ಕಟ್ಟು ಶಮನಗೊಳಿಸಲು ಭಾರತ ಮಧ್ಯಸ್ಥಿಕೆ ವಹಿಸಲಿ ಎಂದು ಫಿನ್‌ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಸಲಹೆ ನೀಡಿದ್ದಾರೆ.

ನಮಗೆ ಈಗ ಯುದ್ಧವಿರಾಮ ಬೇಕಿದೆ. ಇದರಲ್ಲಿ ಭಾರತ ಭಾಗಿಯಾಗಬಹುದು ಎನ್ನುವ ಕುತೂಹಲ ಇದೆ. ಬಿಕ್ಕಟ್ಟು ಶಮನಗೊಳಿಸಲು ಯುದ್ಧವಿರಾಮ ಏರ್ಪಡುವಂತೆ ಜೈಶಂಕರ್ ಕರೆ ನೀಡಿದನ್ನು ನಾವು ನೋಡಿದ್ದೇವೆ ಎಂದು ಸ್ಟಬ್ ಹೇಳಿದ್ದಾರೆ.




