ರಾಷ್ಟ್ರೀಯ ಏಕತಾ ದಿವಸ್ ಮೆರವಣಿಗೆಯಲ್ಲಿ ಮೋದಿಯ ಮೆಚ್ಚುಗೆ ಗಳಿಸಿದ ಭಾರತೀಯ ತಳಿಯ ನಾಯಿಗಳು

Share with

ನವದೆಹಲಿ, ಅಕ್ಟೋಬರ್ 31: ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಗುಜರಾತ್ನ ಏಕತಾನಗರದಲ್ಲಿ ಆಯೋಜಿಸಲಾಗಿದ್ದ ಪರೇಡ್ನಲ್ಲಿ ಹಲವು ವಿಶೇಷತೆಗಳಿತ್ತು. ಅದರಲ್ಲಿ ಭಾರತೀಯ ತಳಿಯ ಶ್ವಾನಗಳ ಪ್ರದರ್ಶನವೂ ಒಂದು. ಈ ವಿಷಯದಲ್ಲೂ ಮೇಡ್ ಇನ್ ಇಂಡಿಯಾ ಸಂಕಲ್ಪಕ್ಕೆ ಮೋದಿ ಸರ್ಕಾರ ಬದ್ಧವಾಗಿದೆ. ಸಾಮಾನ್ಯವಾಗಿ ಪೊಲೀಸ್ ಇಲಾಖೆಯಲ್ಲಿ, ಮಿಲಿಟರಿಯಲ್ಲಿ ವಿದೇಶಿ ತಳಿಗಳ ನಾಯಿಗಳಿಗೆ ಟ್ರೈನಿಂಗ್ ಕೊಟ್ಟು ಬಳಸಲಾಗುತ್ತದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನಮ್ಮ ಭಾರತೀಯ ಸ್ಥಳೀಯ ಜಾತಿಯ ನಾಯಿಗಳಿಗೆ ತರಬೇತಿ ನೀಡಿ ಸೇನೆಯಲ್ಲಿ ಬಳಸಿಕೊಳ್ಳಲು ಸೂಚನೆ ನೀಡಿದ್ದರು. ಅದರಂತೆ ಭಾರತೀಯ ತಳಿಗಳಾದ ಮುಧೋಳ ಮತ್ತು ರಾಂಪುರ ಹೌಂಡ್ ತಳಿಯ ನಾಯಿಗಳಿಗೆ ತರಬೇತಿ ನೀಡಿ ಸೇನೆಯಲ್ಲಿ ಸೇರಿಸಿಕೊಳ್ಳಲಾಗಿದೆ.

ಇಂದು ಏಕತಾ ನಗರದಲ್ಲಿ ನಡೆದ ಮುಧೋಳ ಮತ್ತು ರಾಂಪುರ ಹೌಂಡ್ ತಳಿಯ ನಾಯಿಗಳ ಕಸರತ್ತು ಮತ್ತು ಪ್ರದರ್ಶನ ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಧಾನಿ ಮೋದಿ ಅವರು 2018ರಲ್ಲಿ ಬಿಎಸ್‌ಎಫ್ ರಾಷ್ಟ್ರೀಯ ಶ್ವಾನ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಅವರ ಸೂಚನೆಯಂತೆ ರಾಂಪುರ ಹೌಂಡ್ ಮತ್ತು ಮುಧೋಳ ಶ್ವಾನ ತಳಿಗಳಿಗೆ ತರಬೇತಿ ನೀಡಿ ಗಡಿ ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಗಳು ಸೇರಿದಂತೆ ಕಾರ್ಯತಂತ್ರದ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.


Share with

Leave a Reply

Your email address will not be published. Required fields are marked *