ರಜೆ ಮುಗಿಸಿ ಬಂದ ದಿನವೇ ಅಗ್ನಿ ಅವಘಡದಲ್ಲಿ ಭಾರತೀಯ ದಂಪತಿ, ಮಕ್ಕಳು ಸಾವು

Share with

ಕುವೈತ್: ಶುಕ್ರವಾರ ರಾತ್ರಿ ನಡೆದ ಭೀಕರ ಘಟನೆಯಲ್ಲಿ ಭಾರತೀಯ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಕುವೈತ್ ನಲ್ಲಿ ಅಸುನೀಗಿದ್ದಾರೆ. ಅವರ ಫ್ಲ್ಯಾಟ್ ನಲ್ಲಿ ನಡೆದ ಬೆಂಕಿ ಆಕಸ್ಮಿಕದಿಂದಾಗಿ ಭಾರತೀಯ ನಾಲ್ವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿ ಹೇಳಿದೆ.

ಆಲಪ್ಪುಳದ ನೀರಟ್ಟುಪುರಂ ಮೂಲದ ಮ್ಯಾಥ್ಯೂಸ್ ಮುಳಕಲ್, ಅವರ ಪತ್ನಿ ಲಿನಿ ಅಬ್ರಹಾಂ ಮತ್ತು ಅವರ ಇಬ್ಬರು ಮಕ್ಕಳು ಶುಕ್ರವಾರ ರಾತ್ರಿ ಎ.ಸಿಯಲ್ಲಿ ಶಾರ್ಟ್ ಸರ್ಕ್ಯೂಟ್‌ ನಿಂದ ಉಂಟಾದ ಬೆಂಕಿಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.


ರಜೆಗೆಂದು ಭಾರತಕ್ಕೆ ಬಂದಿದ್ದ ಇವರು ಶುಕ್ರವಾರವಷ್ಟೇ ಕುವೈತ್ ಗೆ ಮರಳಿದ್ದರು. ಅದೇ ದಿನ ಈ ದುರ್ಘಟನೆ ನಡೆದಿದೆ. ಅಬ್ಬಾಸಿಯಾ ಪ್ರದೇಶದ ಕಟ್ಟಡದ ಎರಡನೇ ಮಹಡಿಯಲ್ಲಿ ಈ ದಂಪತಿ ವಾಸವಿದ್ದರು.
“ಕುಟುಂಬವು ಕೇರಳದಲ್ಲಿ ರಜೆಗೆಂದು ಹೋದವರು ಕುವೈತ್‌ ಗೆ ಮರಳಿದ್ದರು, ಶುಕ್ರವಾರ ಸ್ಥಳೀಯ ಸಮಯ ಸುಮಾರು 4 ಗಂಟೆಗೆ ಆಗಮಿಸಿದ್ದರು. ಮ್ಯಾಥ್ಯೂಸ್ ಮುಲಾಕಲ್ ರಾಯಿಟರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು, ಅವರ ಪತ್ನಿ ಲಿನಿ ಅಲ್ ಅಹ್ಮದಿ ಗವರ್ನರೇಟ್‌ನ ಅದನ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದರು. ಅವರ ಮಕ್ಕಳು ಭವಾನ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು” ಎಂದು ದಿ ಅರಬ್ ಟೈಮ್ಸ್ ಪತ್ರಿಕೆ ಹೇಳಿದೆ.


Share with

Leave a Reply

Your email address will not be published. Required fields are marked *