ದೆಹಲಿ: ಇತ್ತೀಚಿನ ಕ್ರೌಡ್‌ಸ್ಟ್ರೈಕ್ ಅಪ್‌ಡೇಟ್ (CrowdStrike update)ನಿಂದಾಗಿ ಇಂದು(ಶುಕ್ರವಾರ) ಮೈಕ್ರೋಸಾಫ್ಟ್ ವಿಂಡೋಸ್ (Microsoft Windows) ಸೇವೆ ಸ್ಥಗಿತಗೊಂಡಿದೆ. ಇದು ಅನೇಕ ಬಳಕೆದಾರರಿಗೆ ಭಯಾನಕ “ಬ್ಲೂ ಸ್ಕ್ರೀನ್ ಆಫ್ ಡೆತ್” ಎರರ್ ತೋರಿಸಿದೆ. ಇಂಡಿಗೋ (Indigo) ಕೂಡ ಈ ಸೇವೆಯ ನಿಲುಗಡೆಯಿಂದ ಪ್ರಭಾವಿತವಾಗಿದೆ. ಕಂಪ್ಯೂಟರ್ ಕಾರ್ಯವೆಸಗದೇ ಇರುವ ಕಾರ ವಿಮಾನಯಾನವು ಪ್ರಯಾಣಿಕರಿಗೆ ಕೈಬರಹದ ಬೋರ್ಡಿಂಗ್ ಪಾಸ್‌ಗಳನ್ನು ನೀಡುತ್ತಿದೆ.
ಮೈಕ್ರೋಸಾಫ್ಟ್ / ಕ್ರೌಡ್‌ಸ್ಟ್ರೈಕ್ ಸ್ಥಗಿತವು ಭಾರತದ ಹೆಚ್ಚಿನ ವಿಮಾನ ನಿಲ್ದಾಣಗಳಿಗೆ ಹೊಡೆತ ನೀಡಿದೆ. ಇಂಡಿಗೋ ನೀಡಿದ ಬೋರ್ಡಿಂಗ್ ಪಾಸ್‌ನ ಚಿತ್ರವನ್ನು ಹಂಚಿಕೊಂಡ ಎಕ್ಸ್ ಬಳಕೆದಾರ ಅಕ್ಷಯ್ ಕೊಠಾರಿ ನನ್ನ ಮೊದಲ ಕೈ ಬರಹದ ಬೋರ್ಡಿಂಗ್ ಪಾಸ್ ಅನ್ನು ಇಂದು ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪೋಸ್ಟ್‌ಗೆ ತರಹೇವಾರಿ ಕಾಮೆಂಟ್ ಮಾಡಿದ್ದು “ನಾವು ಶಿಲಾಯುಗಕ್ಕೆ ಹಿಂತಿರುಗುತ್ತಿದ್ದೇವೆ” ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು “ಇಟ್ಟುಕೊಳ್ಳಲು ಉತ್ತಮ ನೆನಪು ಎಂದು ಹೇಳಿದ್ದಾರೆ.
“ಕೈಯಿಂದ ಬರೆದ ಬೋರ್ಡಿಂಗ್ ಪಾಸ್? ಇದು ಡಿಜಿಟಲ್ ಪೂರ್ವ ಯುಗಕ್ಕೆ ರೆಟ್ರೊ ಥ್ರೋಬ್ಯಾಕ್‌ನಂತಿದೆ!ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟಿಸಿದ್ದಾರೆ. “ನಾವು ತಂತ್ರಜ್ಞಾನದ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಎಂಬುದನ್ನು ನೋಡಲು ಆಕರ್ಷಕವಾಗಿದೆ. ಈ ನಿಲುಗಡೆಯು ಬ್ಯಾಕ್‌ಅಪ್ ವ್ಯವಸ್ಥೆಗಳ ಪ್ರಾಮುಖ್ಯತೆ ಮತ್ತು ಮಾನವನ ಚತುರತೆಯ ಸ್ಥಿತಿಸ್ಥಾಪಕತ್ವವನ್ನು ಎತ್ತಿ ತೋರಿಸುತ್ತದೆ” ಎಂದು ಎಕ್ಸ್ ಬಳಕೆದಾರರೊಬ್ಬರು ಹೇಳಿದ್ದಾರೆ.