ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬ ಮಾತಿನಂತೆ ನಮ್ಮ ಆರೋಗ್ಯ ನಮ್ಮ ಪರಿಸರ ವನ್ನು ಸ್ವಚ್ಛ ಮಾಡಿ ಇರಿಸಿಕೊಳ್ಳುವುದನ್ನು ಅವಲಂಬಿಸಿದೆ ಎಂದು ಸಮುದಾಯ ಅರೋಗ್ಯ ಅಧಿಕಾರಿ ಹರ್ಷಿತ ಹೇಳಿದರು. ಅವರು ಬಂಟ್ವಾಳ ತಾಲೂಕು ವೀರಕಂಭ ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಡೆಂಗ್ಯೂ ಮಲೇರಿಯಾ ರೋಗ ನಿಯಂತ್ರಣದಬಗ್ಗೆ ನಡೆದ ಅರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ನಮ್ಮ ಆರೋಗ್ಯಕರವಾದ ಬದುಕನ್ನು ಜೀವಿಸುವುದು ಒಂದು ಸವಾಲೇ ಸರಿ ಅದರಂತೆ ಹಲವಾರು ರೋಗಗಳಿಗೆ ಅನುಕೂಲ ಪರಿಸ್ಥಿತಿಯನ್ನು ಹೊಂದಿರುವ ಈ ವಾತಾವರಣವು ನಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡುತ್ತದೆ ಹಾಗಾಗಿ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ಡೆಂಗ್ಯೂ ಮಲೇರಿಯ ವನ್ನು ಹರಡುವ ಸೊಳ್ಳೆಗಳ ಉಗಮ ಸ್ಥಾನದ ಸರಿಯಾದ ನಿರ್ವಹಣೆ ಅವುಗಳನ್ನು ಬಾರದಂತೆ ತಡೆಗಟ್ಟುವ ವಿಧಾನ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವೀರಕಂಭ ಗ್ರಾಮ ವ್ಯಾಪ್ತಿಯ ಅರೋಗ್ಯ ಸುರಕ್ಷಾ ಅಧಿಕಾರಿ ಜ್ಯೋತಿ ಕೆ ಏನ್ ಆರೋಗ್ಯಕರ ಪರಿಸರದೊಂದಿಗೆ ಉತ್ತಮ ಜೀವನ ಶೈಲಿಯನ್ನು ರೂಡಿಸಿಕೊಳ್ಳಬೇಕು ನಿಯಮಿತವಾಗಿ ವ್ಯಾಯಾಮ ಉತ್ತಮ ಆಹಾರಗಳು ಮತ್ತು ಶುದ್ಧವಾದ ನೀರು ನಮ್ಮ ಆರೋಗ್ಯಕ್ಕೆ ಸಹಕಾರಿಯಾಗಿದೆ, ರೋಗ ಬಂದ ಮೇಲೆ ಚಿಂತಿಸುವ ಬದಲು ರೋಗ ಬರುವ ಮೊದಲೇ ಮುನ್ನೆಚ್ಚರಿಕೆ ವಹಿಸಬೇಕೆಂದು ಎಂದರು. ಮಜಿ ಶಾಲಾ ಹಿರಿಯ ಶಿಕ್ಷಕಿ ಶಕುಂತಲಾ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ, ಲೀಲಾವತಿ ಉಪಸ್ಥಿತರಿದ್ದರು. ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು