ಉಪ್ಪಳ: ರಸ್ತೆ ಬದಿಯಲ್ಲಿ ಕೈಗೆಟಕುವ ರೀತಿಯಲ್ಲಿ ವಿದ್ಯುತ್ ಪ್ಯೂಸ್ ಸ್ಥಾಪನೆ: ಸ್ಥಳೀಯರಲ್ಲಿ ಆತಂಕ ಭದ್ರತೆ ಒದಗಿಸಲು ಒತ್ತಾಯ

Share with

ಉಪ್ಪಳ: ರಸ್ತೆ ಬದಿಯಲ್ಲಿ ಟ್ರಾನ್ಸ್ ಫಾರ್ಮರ್ ಜೊತೆ ಪಿಯುಸ್‌ನ್ನು ಕೈಗೆಟಕುವ ರೀತಿಯಲ್ಲಿ ಸ್ಥಾಪಿಸಿರುವುದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ಇದಕ್ಕೆ ಸುತ್ತು ಭದ್ರತೆಯನ್ನು ಒದಗಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಸ್ತೆ ಬದಿಯಲ್ಲಿ ಕೈಗೆಟಕುವ ರೀತಿಯಲ್ಲಿ ವಿದ್ಯುತ್ ಪ್ಯೂಸ್ ಸ್ಥಾಪನೆ

ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಹಿನ್ನೆಲೆಯಲ್ಲಿ ತಲಪಾಡಿಯಿಂದ ಕಾಸರಗೋಡು ತನಕದ ವಿದ್ಯುತ್ ಕಂಬ ಸಹಿತ ಟ್ರಾನ್ಸ್ ಫಾರ್ಮರ್ ಹಾಗೂ ಅದರ ಫಿಯುಸ್‌ನ್ನು ತೆರವುಗೊಳಿಸಿ ಸರ್ವೀಸ್ ರಸ್ತೆ ಬದಿಯಲ್ಲಿ ಅಳವಡಿಸಲಾಗುತ್ತಿದೆ.

ಆದರೆ ಟ್ರಾನ್ಸ್ ಫಾರ್ಮರ್ ಜೊತೆ ಹಲವು ಪ್ಯೂಸ್‌ಗಳನ್ನು ಕೈಗೆ ಎಟಕುವ ರೀತಿಯಲ್ಲಿ ಸ್ಥಾಪಿಸಿರುವುದು ವಿದ್ಯುತ್‌ಇಲಾಖೆ ಅಧಿಕಾರಿಗಳ ಅನಾಸ್ಥೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹೊಸಂಗಡಿ, ಉಪ್ಪಳ ಶಾಲಾ ಬಳಿ, ಉಪ್ಪಳ ಪೇಟೆ, ನಯಬಜಾರ್ ಮೊದಲಾದ ಜನನಿಬಿಡ ಪ್ರದೆಶಗಳಲ್ಲಿ ಕೈಗೆ ಎಟಕುವ ರೀತಿಯಲ್ಲಿ ಸ್ಥಾಪಿಸಲಾಗಿದೆ.

ಇಲ್ಲಿಂದ ಮಕ್ಕಳ ಸಹಿತ ನೂರರು ಮಂದಿ ದಿನನಿತ್ಯ ನಡೆದಾಡುವ ಪ್ರದೇಶವಗಿದ್ದು, ಅಪಾಯಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ಇದಕ್ಕೆ ಸುತ್ತು ವ್ಯವಸ್ಥಿತ ರೀತಿಯಲ್ಲಿ ಸುತ್ತು ಬೇಲಿ ಹಾಕಿ ಭದ್ರತೆಯನ್ನು ಒದಗಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *