ಪುತ್ತೂರು, ಸೆಪ್ಟೆಂಬರ್ 22: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇನ್ವಿಕ್ತ ಕಾಮರ್ಸ್ ಅಸೋಸಿಯೇಷನ್ ಮತ್ತು ಐಕ್ಯುಎಸಿ ಇದರ ಸಹ ಯೋಗದೊಂದಿಗೆ ಮಂಗಳೂರು ವಿಶ್ವ ವಿದ್ಯಾಲಯದ ವಾಣಿಜ್ಯ ಶಿಕ್ಷಕರ ಸಂಘದಿಂದ “ಇನ್ವೆಸ್ಟರ್ ಅವೇರ್ನೆಸ್ ಪ್ರೋಗ್ರಾಮ್” ಎಂಬ ಒಂದು ದಿನದ ಮಾಹಿತಿ ಕಾರ್ಯಗಾರವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮಾಹಿತಿ ಕಾರ್ಯಗಾರವನ್ನು ಕಾಲೇಜಿನ ಅಧ್ಯಕ್ಷರಾದ ಶ್ರೀ ಜಯಂತ್ ನಡುಬೈಲು ಉದ್ಘಾಟಿಸಿ ಅಧ್ಯಕ್ಷೀಯ ನೆಲೆಯಲ್ಲಿ ವಿಧ್ಯಾರ್ಥಿಗಳಿಗೆ ಶುಭಕೋರಿದರು.
“ಇನ್ವೆಸ್ಟರ್ ಅವೇರ್ನೆಸ್” ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಇನ್ವೆಸ್ಟ್ಮೆಂಟ್ ಸರ್ವಿಸಸ್ ಪ್ರೊಫೆಷನಲ್ ಶ್ರೀಮತಿ ಸಪ್ನ ಶೆನೊಯ್ ಮತ್ತು Sr.ಬ್ರಾಂಚ್ ಮ್ಯಾನೇಜರ್ ಲಿಯೋ ಅಮಲ್.ಎ ಅವರು ವಿದ್ಯಾರ್ಥಿಗಳಿಗೆ ಹಣಕಾಸಿನ ಸಾಕ್ಷರತೆ, ವೈಯಕ್ತಿಕ ಹೂಡಿಕೆಯ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಕಿಶೋರ್ ಕುಮಾರ್ ರೈ , ಇನ್ವಿಕ್ತ ಕಾಮರ್ಸ್ ಅಸೋಸಿಯೇಷನ್ ಸಂಯೋಜಕಿ ಭವ್ಯಶ್ರೀ.ಬಿ ಉಪಸ್ಥಿತರಿದ್ದರು. ಪ್ರಾರ್ಥನೆ ಲಿಖಿತ ಮತ್ತು ಬಳಗದಿಂದ ನಡೆಯಿತು. ವಿದ್ಯಾರ್ಥಿ ಹಸ್ತಿಕ್ ಪಿ.ಕೆ ಸ್ವಾಗತಿಸಿ, ಪೂಜಾಶ್ರೀ ಡಿ.ಎಸ್ ವಂದಿಸಿದರು. ಸಾಕ್ಷಿ ಕೆ.ಇ ಕಾರ್ಯಕ್ರಮ ನಿರೂಪಿಸಿದರು .