ಐಒಟಿ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಡಿಜಿಟಲ್ ತಂತ್ರಜ್ಞಾನ

Share with



ವ್ಯಾಪಕವಾದ ಡೇಟಾ ಯುಗದಲ್ಲಿ, ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಜ್ಞಾನ ಅತ್ಯಮೂಲ್ಯವಾದ ಮತ್ತು ಅನಿವಾರ್ಯವಾದ ಒಂದು ಅಂಶವಾಗಿದೆ. ಈಗಿನ ಪೈಪೋಟಿಯ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಅದನ್ನು ಅನುಸರಿಸುವ ಜ್ಞಾನ ಅತ್ಯವಶ್ಯವಾಗಿದೆ. ಐಒಟಿ ಮತ್ತು ಡಿಜಿಟಲ್ ತಂತ್ರಜ್ಞಾನಗಳು ಜಾಗತಿಕ ಮಟ್ಟದಲ್ಲಿ ಉದ್ಯಮ, ಶಿಕ್ಷಣ, ಆರೋಗ್ಯ ಮತ್ತು ಬಹುತೇಕ ಎಲ್ಲಾ ವಾಣಿಜ್ಯ ಕ್ಷೇತ್ರಗಳಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತಿವೆ.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಐಒಟಿ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಸಂಬಂಧಿತ ಮೂಲಭೂತ ವಿಷಯಗಳ ಬಗ್ಗೆ ಮಾಹಿತಿ ನೀಡುವುದಕ್ಕೆ ಬೇಕಾಗಿ, ಅಕ್ಷಯಾ ಕಾಲೇಜು, ಪುತ್ತೂರು, ಬಿ.ಸಿ.ಎ. ವಿಭಾಗ, ಮತ್ತು ಐಕ್ಯೂಎಸಿ ಇವುಗಳ ಸಹಯೋಗದಲ್ಲಿ ಪ್ರಥಮ ಬಿ.ಸಿ.ಎ. ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರವು ದಿನಾಂಕ 08 ಆಗಸ್ಟ್ 2024, ಗುರುವಾರದಂದು ನಡೆಯಿತು.

ಈ ಕಾರ್ಯಾಗಾರದಲ್ಲಿ, ಸಂಪನ್ಮೂಲ ವ್ಯಕ್ತಿಯಾದ ನಿಧಿಶ್ರೀ ಎಂ ಪಿ ಉಪನ್ಯಾಸಕಿ ಗಣಕ ವಿಭಾಗ, ಅಕ್ಷಯ ಕಾಲೇಜ್ ಪುತ್ತೂರು  ಅವರಿಂದ ಸ್ಮಾರ್ಟ್ ಡಿವೈಸುಗಳು, ಡಿಜಿಟಲ್ ತಂತ್ರಜ್ಞಾನಗಳ ಮಹತ್ವ ಮತ್ತು ಆವಿಷ್ಕಾರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ತಂತ್ರಜ್ಞಾನ ಕ್ಷೇತ್ರದಲ್ಲಿ ಉದಯೋನ್ಮುಖ ಆವಿಷ್ಕಾರಗಳ ಮಹತ್ವವನ್ನು ತಿಳಿಸಿ, ಐಒಟಿ ತಂತ್ರಜ್ಞಾನವು ನಮ್ಮ ದಿನನಿತ್ಯದ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಚರ್ಚೆ ಮಾಡಲಾಯಿತು.

ಕಾರ್ಯಕ್ರಮದ ಒಂದು ಭಾಗವಾಗಿ, “ಟೆಕ್ ಟೈಟನ್ಸ್: ಎಮರ್ಜಿಂಗ್ ಟೆಕ್ನಾಲಜಿಗಳ ಕುರಿತ ಕ್ವಿಜ್” ಅನ್ನು ಹಮ್ಮಿಕೊಳ್ಳಲಾಯಿತು ಹಾಗೂ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಾಗಾರದ ಕೊನೆಗೆ, ಡಿಜಿಟಲ್ ಫೌಂಡೇಶನ್ ಮತ್ತು ಸೈಬರ್ ಸುರಕ್ಷತೆ, ಡೇಟಾ ಸಂಗ್ರಹಣೆ, ಮತ್ತು ಸಂಚಾರ ನಿರ್ವಹಣೆ ಕುರಿತಾದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಬಿ.ಸಿ.ಎ. ವಿಭಾಗದ ಉಪನ್ಯಾಸಕಿ ಸೌಜನ್ಯ ಎಚ್ ಇವರು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕರು ಮತ್ತು  ಬಿ.ಸಿ.ಎ. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *