ಬಾಂಗ್ಲಾದೇಶದಲ್ಲಿ ಐಪಿಎಲ್ ಪಂದ್ಯಗಳು ಪ್ರಸಾರವಾಗುವ ಸಾಧ್ಯತೆ ಕಡಿಮೆ ಇದೆ ಎಂದು ವರದಿಯಾಗಿದೆ. ಬಾಂಗ್ಲಾ ಸರ್ಕಾರ ಇತ್ತೀಚೆಗೆ ಪಂದ್ಯಗಳ ಪ್ರಸಾರಕ್ಕೆ ಹಸಿರು ನಿಶಾನೆ ತೋರಿಸಿದ್ದರೂ, ಜಿಯೋಸ್ಟಾರ್ ಈಗ ಪ್ರಸಾರದ ಒಪ್ಪಂದವನ್ನು ರದ್ದುಗೊಳಿಸಿದೆ.

2023-2027 ಅವಧಿಗೆ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿದ್ದ ಬಾಂಗ್ಲಾದೇಶದ ಚಾನೆಲ್ ‘ಟಿ ಸ್ಪೋರ್ಟ್ಸ್’ ನಿಗದಿತ ಗಡುವಿನೊಳಗೆ ಪಾವತಿಗಳನ್ನು ಮಾಡಲು ವಿಫಲವಾಗಿದೆ. ಈ ಕಾರಣದಿಂದಾಗಿಯೇ ಜಿಯೋಸ್ಟಾರ್ ಪ್ರಸಾರ ಮಾಡುವ ಒಪ್ಪಂದವನ್ನು ರದ್ದುಗೊಳಿಸಿದೆ.




