ಮಾರ್ಚ್ 28ರಿಂದ ಆರಂಭವಾಗಬೇಕಿದ್ದ IPL ಯುದ್ಧದಿಂದಾಗಿ ಮುಂದೂಡಲಾಗುತ್ತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಆಟಗಾರರು ಹೋಟೆಲ್‌ಗಳಲ್ಲಿ ಗ್ಯಾಸ್ ಕೊರತೆಯಂತಹ ಸಮಸ್ಯೆ ಎದುರಿಸಬಹುದು.

ಹಲವು ರಾಜ್ಯಗಳ ಚುನಾವಣೆಗಳ ಹಿನ್ನೆಲೆ ಈಗಾಗಲೇ ವೇಳಾಪಟ್ಟಿ ತಡವಾಗಿದೆ. ಜೊತೆಗೆ ವಿಮಾನ ಸೇವೆಗಳಲ್ಲಿನ ಅಡಚಣೆಗಳಿಂದಾಗಿ ವಿದೇಶಿ ಆಟಗಾರರ ಆಗಮನದ ಬಗ್ಗೆ ಅನಿಶ್ಚಿತತೆಗಳಿವೆ. ಟೂರ್ನಿ ಪ್ರಾರಂಭದ ಹೊತ್ತಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ, ಪರ್ಯಾಯ ಮಾರ್ಗ ಹುಡುಕುತ್ತೇವೆ ಎಂದಿದ್ದಾರೆ IPL ಚೇರ್ಮನ್.




