ಇರಾನ್-US, ಇಸ್ರೇಲ್ ಯುದ್ದದಿಂದ ಭಾರತಕ್ಕೆ ದೊಡ್ಡ ಮಟ್ಟದಲ್ಲಿ ಆರ್ಥಿಕ ನಷ್ಟ ಆಗುವ ಸಾಧ್ಯತೆಯಿದೆ. US, ಇಸ್ರೇಲ್ ವಿರುದ್ಧ ಪ್ರತಿ ದಾಳಿ ನಡೆಸುತ್ತಿರುವ ಇರಾನ್, ಹಾರ್ಮೋಜ್ ಜಲಸಂಧಿಯನ್ನು ಬಂದ್ ಮಾಡಿದೆ.

ಹೀಗಾಗಿ ಭಾರತದ ಸುಮಾರು 4 ಲಕ್ಷ ಟನ್ ಬಾಸ್ಮತಿ ಅಕ್ಕಿ ಅಂತಾರಾಷ್ಟ್ರೀಯ ಬಂದರುಗಳಲ್ಲಿ ಸಿಲುಕಿಕೊಂಡಿದ್ದು, ರಫ್ತುದಾರರು, ಗಿರಣಿಗಾರರು & ರೈತರಿಗೆ ಭಾರಿ ಸಂಕಷ್ಟ ತಂದೊಡ್ಡುವ ಭೀತಿ ಉಂಟು ಮಾಡಿದೆ. ಈ ಯುದ್ಧದ ಪರಿಣಾಮವು ಭಾರತದ ಕೃಷಿ ರಫ್ತು, ಆರ್ಥಿಕತೆಯ ಮೇಲೆ ಬೀರುತ್ತಿದೆ.




