ದೋಹಾ,ಮಾರ್ಚ್ 20: ಕತಾರ್ನ ನೈಸರ್ಗಿಕ ಅನಿಲ ಘಟಕದ ಮೇಲೆ ಇರಾನ್(Iran) ನಡೆಸಿದ ಘಾತಕ ದಾಳಿಯಿಂದ ವಿಶ್ವದ ಐದು ಬಲಿಷ್ಠ ರಾಷ್ಟ್ರಗಳಿಗೆ ಮುಂದನ ಐದು ವರ್ಷಗಳವರೆಗೆ ಅನಿಲ ಪೂರೈಕೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಈಗ ಬರುತ್ತಿರುವ ವರದಿಗಳ ಪ್ರಕಾರ, ಕತಾರ್ನಿಂದ ಭಾರತಕ್ಕೆ ರವಾನೆಯಾಗುತ್ತಿರುವ ಅನಿಲಕ್ಕೂ ಸಮಸ್ಯೆಯಾಗುವ ಸಾಧ್ಯತೆ ಇದೆ. ವಿಶ್ವದ ಶೇ.17ರಷ್ಟು ನೈಸಗರ್ಗಕ ಅನಿಲ ಪೂರೈಕೆಯು ಕತಾರ್ನ ಇದೊಂದೇ ಘಟಕದಿಂದ ಆಗುತ್ತದೆ.
ವಿಶ್ವದ ಅತ್ಯಂತ ದೊಡ್ಡ ನೈಸಿರ್ಗಿಕ ಅನಿಲ ಘಟಕ ಇದಾಗಿದೆ, ಇರಾನ್ ದಾಳಿಯಿಂದ ಕತಾರ್ಗೆ ವಾರ್ಷಿಕ ಸುಮಾರು 20 ಬಿಲಿಯನ್ ಡಾಲರ್ನಷ್ಟು ಆದಾಯ ನಷ್ಟವಾಗುವ ಸಾಧ್ಯತೆ ಇದೆ. ಹಾಗೆಯೇ ವಾರ್ಷಿಕವಾಗಿ ಸುಮಾರು 12.8 ಮಿಲಿಯನ್ ಟನ್ ಎಲ್ಎನ್ಜಿ ಪೂರೈಕೆಯಲ್ಲಿ ಮುಂದಿನ ಮೂರರಿಂದ ಐದು ವರ್ಷಗಳವರೆಗೆ ವ್ಯತ್ಯಯಾಗಬಹುದು ಎಂದು ಅಂದಾಜಿಸಲಾಗಿದೆ.
ಇದನ್ನು ಕತಾರ್ನ ಇಂಧನ ಇಲಾಖೆಯೇ ಖಾತ್ರಿಪಡಿಸಿದೆ, ಇದರಿಂದ ಭಾರತ, ಚೀನಾ ಸೇರಿದಂತೆ ಕೆಲವು ಏಷ್ಯಾ ಹಾಗೂ ಐರೋಪ್ಯ ರಾಷ್ಟ್ರಗಳು ಸಮಸ್ಯೆಗೆ ಈಡಾಗಬಹುದು. ಇರಾನ್ನೊಂದಿಗೆ ಕತಾರ್ ಉತ್ತಮ ಸಂಬಂಧವನ್ನೇ ಹೊಂದಿತ್ತು. ಹೀಗಾಗಿ ಕನಸಲ್ಲಿಯೂ ಕತಾರ್ನ ಅಂತಹ ಪ್ರಮುಖ ಘಟಕಗಳ ಮೇಲೆ ಇರಾನ್ ದಾಳಿ ಮಾಡಲಿದೆ ಎಂದು ಅಲ್ಲಿನ ಆಡಳಿತ ವ್ಯವಸ್ಥೆ ಅಂದಾಜು ಮಾಡಿರಲಿಲ್ಲ. ಹೀಗಾಗಿ ಮುಸ್ಲಿಂ ರಾಷ್ಟ್ರವೊಂದು ಈ ರೀತಿ ದಾಳಿ ಮಾಡಿದೆ ಎಂದು ಕತಾರ್ ಆಕ್ರೋಶಗೊಂಡಿದೆ. ಆದರೆ ಈ ಕೃತ್ಯವು ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ದುಃಸ್ವಪ್ನವಾಗಿ ಕಾಡಿದೆ.
ಇಟಲಿ, ಬೆಲ್ಜಿಯಂ, ದಕ್ಷಿಣ ಕೊರಿಯಾ ಹಾಗೂ ಚೀನಾಕ್ಕೆ ಅನಿಲ ಪೂರೈಕೆ ಮಾಡುತ್ತಿದ್ದ ಘಟಕದ ಎರಡು ಟ್ರೇನ್ಗಳ ಮೇಲೆ ಇರಾನ್ ದಾಳಿ ಮಾಡಿದೆ. ಇದರಿಂದ ಈ ದೇಶಗಳೊಂದಿಗೆ ದೀರ್ಘಾವಧಿಗೆ ಮಾಡಿಕೊಂಡಿದ್ದ ಅನಿಲ ಪೂರೈಕೆ ಒಪ್ಪಂದಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಎಲ್ಎನ್ಜಿ ಟ್ರೇನ್ ಎಸ್4 ಮೇಲೆ ದಾಳಿಯು ಹಾನಿ ಮಾಡಿರುವ ಪರಿಣಾಮದಿಂದ ಇಟಲಿ ಹಾಗೂ ಬೆಲ್ಜಿಯಂಗೆ ಆಗುವ ಅನಿಲ ಪೂರೈಕೆಗಳು ಭಾಹಶಃ ಸ್ಥಗಿತಗೊಂಡಿದೆ.
ಇದು ಸರಿಯಾಗಲು ವರ್ಷಗಳೇ ಬೇಕಾಗಬಹುದು. ಎಸ್6 ಟ್ರೇನ್ನಿಂದ ದಕ್ಷಿಣ ಕೊರಿಯಾ ಹಾಗೂ ಚೀನಾಕ್ಕೆ ಅನಿಲ ಪೂರೈಕೆಯಾಗುತ್ತಿತ್ತು. ಒಂದೆಡೆ ಈ ದಾಳಿಯಿಂದ ವಿಶ್ವದ ಇತರೆ ರಾಷ್ಟ್ರಗಳಗೆ ಸಮಸ್ಯೆಯಾಗುವುದರ ಜತೆಗೆ ಕತಾರ್ನ್ನು 10ರಿಂದ 20 ವರ್ಷಗಳ ಹಿಂದಕ್ಕೆ ಕೊಂಡೊಯ್ದಿದೆ ಎಂದು ಕತಾರ್ನ ಇಂಧನ ಸಚಿವ ಅಲ್ ಕಾಬಿ ಹೇಳಿದ್ದಾರೆ. ಇರಾನ್ ದಾಳಿಯಿಂದ ಹಾನಿಯಾಗಿರುವ ಘಟಕದ ಪುನರ್ನಿರ್ಮಾಣಕ್ಕೆ 26 ಬಿಲಿಯನ್ ಡಾಲರ್ ಬೇಕಾಗಬಹುದು ಎಂದು ಕತಾರ್ ಹೇಳಿದೆ.
ಈ ದಾಳಿಯಿಂದ ಕತಾರ್ನ ಒಟ್ಟಾರೆ ರಫ್ತಿನಲ್ಲಿ ಶೇ.24ರಷ್ಟು ಕುಸಿತವಾಗಿದೆ. ಘಟಕದ ಮೇಲಿನ ಹಾನಿಯಿಂದ ದೀರ್ಘಾವಧಿಯಲ್ಲಿ ಭಾರತದ ಮೇಲೆ ಪ್ರತಿಕೂಲ ಪರಿಣಾಮವಾಗದಿದ್ದರೂ ಅಲ್ಪಾವಧಿಯಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು. ಏಕೆಂದರೆ ಭಾರತದ ಒಟ್ಟಾರೆ ಎಲ್ಎನ್ಜಿ ಆಮದಿನಲ್ಲಿ ಕತಾರ್ನ ಭಾಗವು ಶೇ.20ರಷ್ಟಿದೆ.





