
ದೇಶದಲ್ಲಿ ಮತ್ತೆ ಕೊರೊನಾ ವೈರಸ್ ಆತಂಕ ಮೂಡಿಸಿದೆ. ಜನವರಿಯಿಂದ ಮಹಾರಾಷ್ಟ್ರದಲ್ಲಿ 2 ಸಾವುಗಳು ಸಂಭವಿಸಿವೆ ಮತ್ತು ಈ ತಿಂಗಳು ಕೇರಳದಲ್ಲಿ 182 ಹೊಸ ಪ್ರಕರಣಗಳು ವರದಿಯಾಗಿವೆ.

ಎರಡೂ ರಾಜ್ಯಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಮುಂದುವರೆದಿದ್ದು, ಜನರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ. ಕರ್ನಾಟಕದಲ್ಲೂ 16 ಕೇಸ್ ಪತ್ತೆಯಾಗಿವೆ.
ಶೀತ, ಗಂಟಲು ನೋವು, ಕೆಮ್ಮು ಅಥವಾ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಜನರು ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.




