‘ಮಹಾವೀರ್ ನರಸಿಂಹ’ ಫೈಟ್ ಸೀನ್ ಕಾಪಿಯಾ ಅಥವಾ ಸ್ಪೂರ್ತಿಯಾ?

Share with

ಕಳೆದ ವರ್ಷ ಬಿಡುಗಡೆ ಆಗಿ ಬಾಕ್ಸ್ ಆಫೀಸ್ನಲ್ಲಿ (Box Office) ಭಾರಿ ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಅನಿಮೇಷನ್ ಸಿನಿಮಾ ‘ಮಹಾತಾರ್ ನರಸಿಂಹ’ ಸಹ ಒಂದು. ಮಾತ್ರವಲ್ಲದೆ ಭಾರತ ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಮೊದಲ ಅನಿಮೇಷನ್ ಸಿನಿಮಾ ಸಹ ‘ಮಹಾವತಾರ್ ನರಸಿಂಹ’. ಕ್ಲೀಂ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿ ಅಶ್ವಿನ್ ಕುಮಾರ್ ನಿರ್ದೇಶನ ಮಾಡಿದ್ದ ಈ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ವಿತರಣೆ ಮಾಡಿತ್ತು. ಕಿರಿಯರು, ಹಿರಿಯರು ಮುಗಿಬಿದ್ದು ಈ ಸಿನಿಮಾ ನೋಡಿದ್ದರು. ಆದರೆ ಇದೀಗ ಈ ಸಿನಿಮಾ ಮೇಲೆ ಕೆಲವರು ನಕಲು ಮಾಡಿರುವ ಆರೋಪ ಮಾಡಿದ್ದಾರೆ.

‘ಮಹಾವೀರ್ ನರಸಿಂಹ’ ಸಿನಿಮಾದ ಕೆಲವು ದೃಶ್ಯಗಳು, ಆಕ್ಷನ್ ಪೀಸ್ಗಳನ್ನು ಹಾಲಿವುಡ್ ಸಿನಿಮಾ ಮತ್ತು ಗೇಮುಗಳಿಂದ ನಕಲು ಮಾಡಲಾಗಿದೆ ಎನ್ನಲಾಗುತ್ತಿದೆ. ‘ಮಹಾವತಾರ್ ನರಸಿಂಹ’ ಸಿನಿಮಾದ ಒಂದು ಫೈಟ್ ಸೀನ್ ಅನ್ನು ‘ಗಾಡ್ ಆಫ್ ವಾರ್’ ನೋಡಿ ನಕಲು ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ‘ಮಹಾವತಾರ್ ನರಸಿಂಹ’ ಮತ್ತು ‘ಗಾಡ್ ಆಫ್ ವಾರ್’ನ ಫೈಟ್ ದೃಶ್ಯಗಳನ್ನು ಕಂಪೇರ್ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ವಿಡಿಯೋ ಗಮನಿಸಿದಲ್ಲಿ ‘ಮಹಾವತಾರ್ ನರಸಿಂಹ’ ಮತ್ತು ‘ಗಾಡ್ ಆಫ್ ವಾರ್’ ಫೈಟ್ ದೃಶ್ಯ ಯಥಾವತ್ತು ಒಂದೇ ರೀತಿ ಇದೆ. ಆದರೆ ಹಿನ್ನೆಲೆ ಮತ್ತು ಫೈಟ್ ಮಾಡುತ್ತಿರುವ ಪಾತ್ರಗಳಷ್ಟೆ ಬದಲಾಗಿವೆ. ‘ಮಹಾವತಾರ್ ನರಸಿಂಹ’ ಸಿನಿಮಾದ ಮತ್ತೊಂದು ದೃಶ್ಯ, ಮಾರ್ವೆಲ್ನ ‘ಇಂಕ್ರೆಡಿಬಲ್ ಹಲ್ಕ್’ನ ದೃಶ್ಯದಿಂದ ಸ್ಪೂರ್ತಿ ಪಡೆದು ಮಾಡಲಾಗಿದೆ ಎಂಬ ಆರೋಪವೂ ಇದ್ದು, ಅದಕ್ಕೆ ಸಂಬಂಧಿಸಿದ ಕೆಲ ವಿಡಿಯೋಗಳು ಸಹ ಹರಿದಾಡುತ್ತಿವೆ.

‘ಮಹಾವತಾರ್ ನರಸಿಂಹ’ ಸಿನಿಮಾವನ್ನು ಬಹಳ ಕಡಿಮೆ ಬಜೆಟ್ನಲ್ಲಿ ನಿರ್ಮಿಸಲಾಗಿದೆ. ಕೇವಲ 15 ಕೋಟಿಯಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 350 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಹೊಂಬಾಳೆ ಫಿಲಮ್ಸ್ ಈ ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದು, ಸಿನಿಮಾದ ಅಭೂತಪೂರ್ವ ಗೆಲುವಿನ ಹಿಂದೆ ಹೊಂಬಾಳೆಯ ಶ್ರಮ ಸಾಕಷ್ಟಿದೆ.

‘ಮಹಾವತಾರ್ ನರಸಿಂಹ’ ಸಿನಿಮಾದ ನಿರ್ಮಾಪಕರು ಮತ್ತು ನಿರ್ದೇಶಕ ಈಗಾಗಲೇ ಸಿನಿಮಾದ ಸೀಕ್ವೆಲ್ಗಳನ್ನು ಘೋಷಿಸಿದ್ದಾರೆ. ವಿಷ್ಣುವಿನ ಹಲವು ಅವತಾರಗಳ ಬಗೆಗೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವುದಾಗಿ ಹೇಳಿದ್ದು, ‘ಮಹಾವತಾರ್ ಪರಶುರಾಮ್’, ‘ಮಹಾವತಾರ್ ರಘುನಂದನ’, ‘ಮಹಾವತಾರ್ ದ್ವಾರಕಾದೀಶ’, ‘ಮಹಾವತಾರ್ ಗೋಕುಲನಂದ’, ‘ಮಹಾವತಾರ್ ಕಲ್ಕಿ 1’, ‘ಮಹಾವತಾರ್ ಕಲ್ಕಿ 2’ ಸಿನಿಮಾಗಳನ್ನು ನಿರ್ಮಿಸುವುದಾಗಿ ಘೋಷಿಸಲಾಗಿದೆ.


Share with

Leave a Reply

Your email address will not be published. Required fields are marked *