ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ಸಾಧನೆ ಪ್ರದರ್ಶಿಸದಿರುವ ಕಾರಣ ಪಂಚ ಗ್ಯಾರಂಟಿಗಳ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಪ್ರತಿಪಕ್ಷಗಳು ಟೀಕೆ ಮಾಡಿದ್ದರೂ ಮಹಿಳೆಯರ ಮತ ಬರಲಿದೆ ಎಂದು ಕಾಂಗ್ರೆಸ್ ಊಹೆ ಮಾಡಿತ್ತು. ಮಹಿಳೆಯರನ್ನು ಕೇಂದ್ರೀಕರಿಸಿ ಜಾರಿಗೆ ತಂದಿರುವ ಯೋಜನೆಗಳು ಕೈಹಿಡಿಯಲಿವೆ ಎಂಬುದು ಲೆಕ್ಕಾಚಾವಾಗಿತ್ತು. ಆದರೆ, ಎರಡಂಕೆ ತಲುಪಲು ಕಾಂಗ್ರೆಸ್ ವಿಫಲವಾಗಿದ್ದು, ಗ್ಯಾರಂಟಿ ಮುಂದುವರಿಸಬೇಕೆ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ ಎನ್ನಲಾಗಿದೆ.