ಮಲ್ಪೆ: ಬಂದರಿನ ಕೆಸರಿನಲ್ಲಿ ಹೂತು ಹೋಗಿದ್ದ ಚಿನ್ನದ ಬಳೆ ಹುಡುಕಿಕೊಟ್ಟ ಈಶ್ವರ್ ಮಲ್ಪೆ

Share with

ಉಡುಪಿ: ಮಲ್ಪೆಯ ಆಪದ್ಭಾಂಧವ ಎಂದೇ ಕರೆಸಿಕೊಳ್ಳುವ ಈಶ್ವರ್ ಮಲ್ಪೆ ಈ ಭಾಗದಲ್ಲಿ ಹಲವು ಜನೋಪಯೋಗಿ ಸೇವೆಗೆ ಪ್ರಸಿದ್ಧರು. ನೀರಲ್ಲಿ ಬಿದ್ದವರನ್ನು ರಕ್ಷಣೆ ಮಾಡುವುದು ,ನೀರಲ್ಲಿ ಮುಳುಗಿ ಮೃತಪಟ್ಟ ಹೆಣ ಮೇಲೆತ್ತುವುದು ಇವರಿಗೆ ಚಿಟಿಕೆ ಹೊಡೆದಷ್ಟೇ ಸುಲಭದ ಕೆಲಸ. ಅದೇ ರೀತಿ ನೀರಲ್ಲಿ ಬಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನೂ ಇವರು ಹುಡುಕಿ ಕೊಟ್ಟು ಶಹಬ್ಬಾಶ್ ಗಿಟ್ಟಿಸಿಕೊಂಡವರು.
ಮಲ್ಪೆಗೆ ಸ್ನೇಹಿತರ ಜೊತೆ ಬಂದಿದ್ದ ಪ್ರವೀಣ್ ಎಂಬ ಯುವಕನ ಎರಡು ಲಕ್ಷ ಮೌಲ್ಯದ ಚಿನ್ನದ ಬಳೆ ಮಲ್ಪೆ ಬಂದರಿನ ನೀರಿನಲ್ಲಿ ಕಳೆದುಹೋಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಈಶ್ವರ್ ಮಲ್ಪೆ ನೀರಿನಾಳಕ್ಕೆ ತೆರಳಿ ಕೆಸರಲ್ಲಿ ಹೂತು  ಹೋಗಿದ್ದ ಚಿನ್ನದ ಬಳೆಯನ್ನು ಕ್ಷಣಾರ್ಧದಲ್ಲಿ ಹುಡುಕಿ ಕೊಟ್ಟಿದ್ದಾರೆ. ಈಶ್ವರ್ ಅವರ ಈ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು.


Share with

Leave a Reply

Your email address will not be published. Required fields are marked *