ಇಸ್ರೇಲ್-ಇರಾನ್ ಯುದ್ಧ: ಇರಾನ್‌ನಿಂದ 110 ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ

Share with

ಇಸ್ರೇಲ್-ಇರಾನ್ ಉದ್ವಿಗ್ನತೆ ನಡುವೆ, ಭಾರತ ಸರ್ಕಾರ ಇರಾನ್‌ನ ಉರ್ಮಿಯಾ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಕಾಶ್ಮೀರದ 90 ವಿದ್ಯಾರ್ಥಿಗಳು ಸೇರಿದಂತೆ ಸುಮಾರು 110 ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದೆ.

ಈ ವಿದ್ಯಾರ್ಥಿಗಳು ಮಂಗಳವಾರ ಅರ್ಮೇನಿಯಾ ತಲುಪಿದರು. ಬುಧವಾರ ಬೆಳಿಗ್ಗೆ ಅವರನ್ನು ಯೆರೆವಾನ್ ವಿಮಾನ ನಿಲ್ದಾಣದಿಂದ ಇಂಡಿಗೋ ಮೂಲಕ ದೋಹಾಗೆ ಕರೆತರಲಾಯಿತು. ಅಲ್ಲಿಂದ ದೆಹಲಿಗೆ ಹೊರಟಿದ್ದಾರೆ. ವಿದ್ಯಾರ್ಥಿಗಳು ಇಂದು (june-18) ತಡರಾತ್ರಿ ದೆಹಲಿ ವಿಮಾನ ನಿಲ್ದಾಣ ತಲುಪುವ ನಿರೀಕ್ಷೆಯಿದೆ.


Share with