ಚಿಲ್ಲರೆ ಹಣ ಇಲ್ಲದಿದ್ರೆ ಪರ್ವಾಗಿಲ್ಲ, ಆನ್‌ಲೈನ್‌ ಪೇಮೆಂಟ್‌ ಓಕೆ, ರೈಲಿನಲ್ಲಿ ಮಂಗಳಮುಖಿಯ ಡಿಜಿಟಲ್‌ ಭಿಕ್ಷಾಟನೆ

Share with

ಇದು ಡಿಜಿಟಲ್‌ ಯುಗ. ಎಲ್ಲೆಡೆ ಯುಪಿಐ ವಹಿವಾಟಿನದ್ದೇ ಕಾರುಬಾರು. ಪ್ರಸ್ತುತ ನಮ್ಮ ಭಾರತದಲ್ಲಿ ಡಿಜಿಟಲೀಕರಣ ಹೆಚ್ಚು ಹೆಚ್ಚು ಪ್ರಗತಿಯನ್ನು ಪಡೆಯುದ್ದು, ಹೆಚ್ಚಿನ ವ್ಯಾಪಾರ ವಹಿವಾಟುಗಳು ನಗದು ರಹಿತವಾಗಿಯೇ ನಡೆಯುತ್ತಿದೆ. ತಳ್ಳು ಗಾಡಿಯಿಂದ ಹಿಡಿದು ಮಾಲ್‌ಗಳವರೆಗೂ ಎಲ್ಲಾ ವ್ಯಾಪಾರ ವಹಿವಾಟು ಈಗ ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಬದಲಾಗಿದೆ. ಈಗ ಭಿಕ್ಷಾಟನೆ ಕೂಡಾ ಡಿಜಿಟಲ್‌ ಮಯವಾಗಿದ್ದು, ಕ್ಯೂಆರ್‌ ಕೋಡ್‌ ಭಿಕ್ಷೆ ಬೇಡಿದ ಭಿಕ್ಷುಕರು ಸುದ್ದಿಗಳು ಈ ಹಿಂದೆಯೂ ವೈರಲ್‌ ಆಗಿದ್ದವು. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಮಂಗಳಮುಖಿಯೊಬ್ಬರು ಚಿಲ್ಲರೆ ಹಣ ಇಲ್ಲದಿದ್ರೆ ಪರ್ವಾಗಿಲ್ಲ, ಆನ್‌ಲೈನ್‌ ಪೇಮೆಂಟ್‌ ಆನ್‌ಲೈನ್‌ ಪೇಮೆಂಟ್‌ ಮಾಡಿದ್ರೂ ನಡೆಯುತ್ತೇ ಎಂದು ಆನ್‌ಲೈನ್‌ ಮೂಲಕ ಹಣವನ್ನು ಸ್ವೀಕಾರ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಘಟನೆ ಮುಂಬೈನಲ್ಲಿ ನಡೆದಿದ್ದು, ಇಲ್ಲಿನ ಲೋಕಲ್‌ ಟ್ರೈನ್‌ನಲ್ಲಿ ಭಿಕ್ಷೆ ಬೇಡುತ್ತಾ ಬಂದ ಮಂಗಳಮುಖಿಯೊಬ್ಬರು, ಚಿಲ್ಲರೆ ಹಣ ಇಲ್ಲ ಎಂದು ಹೇಳಿದ ಪ್ರಯಾಣಿಕರ ಬಳಿ ಕ್ಯೂಆರ್‌ ಕೋಡ್‌ ಸ್ಕಾನ್‌ ಮಾಡಿಸಿ ಹಣವನ್ನು ಪಡೆದಿದ್ದಾರೆ. ಈ ಕುರಿತ ಪೋಸ್ಟ್‌ ಒಂದನ್ನು ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಮುಂಬೈನ್‌ ಲೋಕಲ್‌ ಟ್ರೈನ್‌ನಲ್ಲಿ ಭಿಕ್ಷೆ ಬೇಡುತ್ತಾ ಬಂದ ಮಂಗಳಮುಖಿಯೊಬ್ಬರು ಚಿಲ್ಲರೆ ಹಣ ಇಲ್ಲ ಎಂದು ಹೇಳಿದ ಪ್ರಯಾಣಿಕರ ಬಳಿ ಕ್ಯೂಆರ್‌ ಕೋಡ್‌ ತೋರಿಸಿ ಹಣ ಪಾವತಿ ಮಾಡಿ ಎಂದು ಹೇಳುವ ದೃಶ್ಯವನ್ನು ಕಾಣಬಹುದು.


Share with

Leave a Reply

Your email address will not be published. Required fields are marked *