ಬೆಂಗಳೂರು: ಬೆಂಗಳೂರಿನಲ್ಲಿ 9 ಚಿನ್ನಾಭರಣ ಮಳಿಗೆ ಮೇಲೆ ಐಟಿ ದಾಳಿ ನಡೆದಿದ್ದು ದಾಳಿ ಅಂತ್ಯವಾಗಿದೆ. ಮತ್ತೊಂದೆಡೆ ಚಿನ್ನದ ವ್ಯಾಪಾರಿ ಓರ್ವರಿಗೆ ಸೇರಿದ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಐಟಿ ಅಧಿಕಾರಿಗಳು ನಡೆಸಿದ ಶೋಧ ಅಂತ್ಯವಾಗಿದೆ. ಐಟಿ ಅಧಿಕಾರಿಗಳು ಜಯನಗರ 3ನೇ ಬ್ಲಾಕ್ನ 8ನೇ ಮುಖ್ಯರಸ್ತೆಯಲ್ಲಿರುವ ಆಭೂಷಣ ಮಳಿಗೆ, ಪೊಲ್ಕಿಸ್, ಮಂಗಳ, ರಿದ್ದಿ, ತಿರುಮಲ ಸೇರಿದಂತೆ 9 ಮಳಿಗೆ ಮೇಲೆ ದಾಳಿಯನ್ನು ನಡೆಸಿದ್ದರು.
ಸದ್ಯ ಮೂರು ದಿನಗಳ ಪರಿಶೀಲನೆ ಅಂತ್ಯವಾಗಿದೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಐಟಿ ರೇಡ್ ನಡೆಯುತ್ತಿದೆ. ಅಂಗಡಿ, ಶೋರೂಂ, ಮಾಲೀಕರ ಮನೆಯಲ್ಲಿ ಐಟಿ ಶೋಧ ಮಾಡುತ್ತಿದೆ. ಮೂರು ದಿನಗಳ ಶೋಧದ ನಂತರ ಡಿ.16ರಂದು ಐಟಿ ದಾಳಿ ಅಂತ್ಯವಾಗಿದೆ ಎಂದು ತಿಳಿದು ಬಂದಿದೆ.