ಕುದ್ದುಪದವು : ಕೊರತಿ ಗುಳಿಗ ಸೇವಾ ಸಮಿತಿ, ಕುದ್ದುಪದವು, ಮೀಂಜ ಇದರ “ಸಾಂತ್ವನ ನಿಧಿ” ಯೋಜನೆಯ ಅಡಿಯಲ್ಲಿ ನೀಡಲಾಗುವ ಸಹಾಯ ಧನವನ್ನು ಇತ್ತೀಚೆಗೆ ನಡೆದ ಬೈಕ್ ಅಪಘಾತದಲ್ಲಿ ತನ್ನ ಬೆನ್ನು ಮೂಳೆಗೆ ಘಾಸಿಯಾಗಿ ಶಯನಾವಸ್ಥೆಯಲ್ಲಿರುವ ಸುಂದರ ಕಲ್ಲಗದ್ದೆ ಯವರಿಗೂ ಅದೇ ರೀತಿ ಸಿಡಿಲಿನ ಆಘಾತದಿಂದ ಮನೆ ಹಾಗೂ ದೈಹಿಕವಾಗಿ ಅಸ್ವಸ್ಥಗೊಂಡ ಶ್ರೀಮತಿ ಸುಗಂಧಿಯವರಿಗೂ ಹಸ್ತಾಂತರಿಸಲಾಯಿತು.ಇದು ಸಮಿತಿಯ 26 ನೇ ಹಾಗೂ 27 ನೇ ಯೋಜನೆಯಾಗಿದೆ.ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.