ಭಾರತ ತಂಡಕ್ಕೆ ಶುಭಕೋರುವ ಸಲುವಾಗಿ ‘ಸ್ಯಾಂಡ್ ಥೀಮ್ ತಂಡದಿಂದ ಕಲಾಕೃತಿ ರಚನೆ
ಉಡುಪಿ: ಶನಿವಾರ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡ ಗೆದ್ದು ಬರಲಿ ಎಂದು ಶುಭಕೋರುವ ಸಲುವಾಗಿ ‘ಸ್ಯಾಂಡ್ ಥೀಮ್ ತಂಡದ ಕಲಾವಿದರು ಕುಂದಾಪುರದ ಕೋಟೇಶ್ವರದ ಹಳೇ ಅಳಿವೆ ಕಡಲ ತೀರದಲ್ಲಿ ರಚಿಸಿದ ‘ಜೈ ಹೋ ಇಂಡಿಯಾ’ ಶಿಲ್ಪ ಕಲಾಕೃತಿ ಗಮನ ಸೆಳೆಯುತ್ತಿದೆ.
ಭಾರತ ಮತ್ತು ಸೌತ್ ಆಫ್ರಿಕಾ ದೇಶದ ಭೂಪಟ, ಟಿ20 ವಿಶ್ವಕಪ್ ಟ್ರೋಫಿ ಹಾಗೂ ಬ್ಯಾಟ್ ನಲ್ಲಿ ರಚಿಸಿರುವ ‘ಜೈ ಹೋ ಇಂಡಿಯಾ’ ಎಂಬ ಬರಹವುಳ್ಳ ಶಿಲ್ಪ ಕಲಾಕೃತಿಯೂ ಕಣ್ಮನ ಸೆಳೆಯುತ್ತಿದೆ.
ಈ ಸುಂದರ ಮರಳು ಶಿಲ್ಪ ಕಲಾಕೃತಿಯನ್ನು ಸ್ಯಾಂಡ್ ಥೀಮ್ ತಂಡದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ರಚಿಸಿದ್ದಾರೆ. ಕಡಲ ಕಿನಾರಿಯಲ್ಲಿ ಅರಳಿದ ಈ ಸುಂದರ ಮರಳು ಶಿಲ್ಪ ಕಲಾಕೃತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.