ಮಂಜೇಶ್ವರ: ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ (ರಿ) ಮಂಜೇಶ್ವರ ಶ್ರೀ ಕೃಷ್ಣ ಜನ್ಮಷ್ಠಮಿ, ಹಾಗೂ 79ನೆ ವರ್ಷದ ಸ್ವಾತಂತ್ರ್ಯ ದಿನವಾದ ಆ.15ರಂದು 94ನೆ ಯೋಜನೆಯನ್ನು ನೀಡುವ ಮೂಲಕ ವಿಭಿನ್ನ ರೀತಿಯಲ್ಲಿ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಹಬ್ಬವನು ಆಚರಿಸಿದರು.

ಕಟ್ಟೆಬಜಾರ್ ನಿವಾಸಿ ಮಂಗಳ ಇವರ ಮಗಳ ವಿದ್ಯಾಭ್ಯಾಸಕ್ಕೆ ಹಾಗೂ ಹಾರ್ಧಿಕವಾಗಿ ಸಂಕಷ್ಟಕ್ಕೆ ಅನುಗುಣವಾಗಿ ವಾಗ್ದಾನವನು ನೀಡಲಾಯಿತು.
ತಾಯಿ ಹಾಗೂ ಮಗಳು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಮಗಳ ಶಿಕ್ಷಣಕ್ಕಾಗಿ ದೀಪದ ಬತ್ತಿ ಮಾರಿ ಅದರಿಂದ ಬರುವ ಹಣದಿಂದ ರೂಮ್ ಬಾಡಿಗೆ ಮನೆ ಖರ್ಚು,ಮಗಳ ಶಿಕ್ಷಣ ಖರ್ಚು ಎಲ್ಲವನು ನಿಭಾಯಿಸಲಾಗದೆ ಇರುವ ಸಮಯದಲ್ಲಿ ಸಂಸ್ಥೆಯ ಸದಸ್ಯನ ಬಳಿ ತನ್ನ ಅಳಲನ್ನು ಹೇಳಿಕೊಂಡರು. ಇವರ ಕಷ್ಟವನ್ನು ಅರಿತು ಸದಸ್ಯರು ಒಟ್ಟು ಗೂಡಿಸಿದ ವಾಗ್ದಾನವನ್ನು ನ್ಯಾಯವಾದಿ ನವೀನ್ ರಾಜ್ ಹಸ್ತಾಂತರ ಮಾಡಿದರು.
ಈ ವೇಳೆ ಉದಯ ಕೊಡ್ಡೆ,ಲೋಕೇಶ್ ಮಾಡ,ಶರತ್ ಅರಿಮಲೆ, ಕೃಷ್ಣ ಅಟ್ಟೆಗೋಲಿ,ಆಶಾ ಲೋಕೇಶ್ ಮಾಡ, ಸುಕೇಶ್ ಬೆಜ್ಜ, ಪ್ರದೀಪ್ ಮೊರತ್ತನೆ ಉಪಸ್ಥಿತರಿದ್ದರು.




