ಕಾರಿನಲ್ಲಿ 4.27 ಗ್ರಾಂ ಎಂಡಿಎಂಎ ಸಾಗಿಸುತ್ತಿದ್ದ ಜಲಾಲದ್ದೀನ್ ಪೊಲೀಸ್ ವಶ

Share with

ಉಪ್ಪಳ: ಕಾರಿನಲ್ಲಿ 4.27 ಗ್ರಾಂ ಎಂಡಿಎಂಎಯನ್ನು ಸಾಗಿಸುತ್ತಿದ್ದ ವೇಳೆ ಪೊಲೀಸರು ಓರ್ವನನ್ನು ವಶಪಡಿಸಿಕೊಂಡಿದ್ದಾರೆ. ಕೊಡ್ಡ ಮೊಗರು ಪಳ್ಳತ್ತುಪದವು ಜುಮೈಲ ಮಂಜಿಲ್‌ನ ಮೊಹಮ್ಮದ್ ಜಲಾಲ ದ್ದೀನ್ (24) ಎಂಬಾತನನ್ನು ಮಂಜೇಶ್ವರ ಎಸ್‌ಐ ಅಜಯ್ ಎಸ್ ಮೆನೋನ್ ಬಂಧಿಸಿದ್ದಾರೆ.

ನಿನ್ನೆ(ಜು.29) ಸಂಜೆ ಎಸ್‌ಐ ನೇತೃತ್ವದ ಪೊಲೀಸರು ಕಳಿಯೂರು ಬಳಿಯ ಉಜಿರೆ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಂದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಹ್ಯಾಂಡ್ ಬ್ರೇಕ್ ಬಳಿ ಮಾದಕವಸ್ತು ಬಚ್ಚಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಿ ಕಾರನ್ನು ವಶಪಡಿಸಲಾಗಿದೆ.

ಆರೋಪಿಯನ್ನು ಇಂದು(ಜು.30) ನ್ಯಾಯಾಲಯದಲ್ಲಿ ಹಾಜರು ಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *