ಉಪ್ಪಳ: ಮಲ್ಲಂಗೈ ಭಂಡಾರ ಹಿತ್ತಿಲು ಪಡಂಗುಡಿಯ ತೀಯಾ ತರವಾಡು ಶ್ರೀ ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ಶ್ರೀ ಪುದಿಯ ಭಗವತೀ ದೈವಗಳ ತರವಾಡಿನಲ್ಲಿ ನಾಗತಂಬಿಲ ಮತ್ತು ವರ್ಷಾವಧಿ ಪರ್ವ ಜ.10 ಮತ್ತು 11ರಂದು ಜರಗಲಿದೆ.

10ರಂದು ಬೆಳಿಗ್ಗೆ 9ಕ್ಕೆ ನಾಗತಂಬಿಲ, 11.30ಕ್ಕೆ ಶ್ರೀ ವೆಂಕಟರಮಣ ದೇವರ ಮುಡಿಪು ಶುದ್ದ, ಮಧ್ಯಾಹ್ನ ಅನ್ನಪ್ರಸಾದ, ರಾತ್ರಿ 7.30ಕ್ಕೆ ಪುದಿಯೋಡ್ಕಲ್ [ಪುತ್ತರಿ ಉತ್ಸವ], ರಾತ್ರಿ 10ಕ್ಕೆ ಗುಳಿಗ ದೈವದ ಕೋಲ, 11ಕ್ಕೆ ಕೊರತಿಯಮ್ಮ ದೈವದ ಕೋಲ.
11ರಂದು ಮುಂಜಾನೆ 3ಕ್ಕೆ ಪುದಿಯ ಭಗವತೀ ದೈವದ ಮತ್ತು ಶ್ರೀ ವಿಷ್ಣುಮೂರ್ತಿ ದೈವಗಳ ಕೋಲ ಮತ್ತು ಪ್ರಸಾದ ವಿತರಣೆ, ಬೆಳಿಗ್ಗೆ 6ಕ್ಕೆ ಕಲ್ಲುರ್ಟಿ ಪಂಜುರ್ಲಿ ದೈವಗಳ ಕೋಲ, ರಾತ್ರಿ 8ಕ್ಕೆ ಮರು ಪುತ್ತರಿ ಕಾರ್ಯಕ್ರಮ ನಡೆಯಲಿದೆ.