ಮಂಗಲ್ಪಾಡಿ: ಪಂಜ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ 25ನೇ ವರ್ಷದ ಶ್ರೀ ಅಯ್ಯಪ್ಪ ಭಜನೋತ್ಸವ ಜ.5 ಮತ್ತು 6ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಜ.5ರಂದು ಸಂಜೆ 7ಕ್ಕೆ ಶ್ರೀ ಶಬರಿ ಮಹಿಳಾ ಸಂಘ ಪಂಜ ಇವರ ವತಿಯಿಂದ ತಿರುವಾದಿರಂ ಮತ್ತು ಕೈಕೊಟ್ಟಿ ಕಳಿ, ಸಂಜೆ 8ಕ್ಕೆ ಮಾತೃಶ್ರೀ ಮಹಿಳಾ ಸ್ವ-ಸಹಾಯ ಸಂಘ ಪಂಜ ಇವರ ವತಿಯಿಂದ ಊರ ಪ್ರತಿಭೆಗಳಿಂದ ನೃತ್ಯ ವೈಭವ, 6ರಂದು ಪ್ರಾತಕಾಲ 4ಕ್ಕೆ ದೀಪಾರಾಧನೆ, ಸ್ವಾಮಿ ಸ್ಮರಣೆ, ಬೆಳಿಗ್ಗೆ 6.57ರಿಂದ ಭಜನೋತ್ಸವ ಪ್ರಾರಂಭ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ, ಸಂಜೆ 6.32ಕ್ಕೆ ಭಜನೋತ್ಸವ ಮಂಗಳಾರತಿ, 7ರಿಂದ 8.30ರ ತನಕ ಶ್ರೀ ಅಯ್ಯಪ್ಪ ಸ್ವಾಮಿ ಕುಣಿತ ಭಜನಾ ತಂಡ ಬಾಯಿಕಟ್ಟೆ ಮತ್ತು ಶ್ರೀ ಸತ್ಯನಾರಾಯಣ ಭಜನಾ ಸಂಘ ಕುಬಣೂರು ಇವರಿಂದ ಕುಣೀತ ಭಜನೆ, ರಾತ್ರಿ 9ಕ್ಕೆ ಸ್ವಾಮಿ ಸ್ಮರಣೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.