ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಹೊತ್ತಿನಲ್ಲಿ ಚಿಕಿತ್ಸೆ ಮೊಟಕು: ಜನಕೀಯ ವೇದಿಯಿಂದ ಪ್ರತಿಭಟನೆ

Share with

ಉಪ್ಪಳ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಹೊತ್ತಿನಲ್ಲಿ ಐ.ಪಿ ತುರ್ತು ವಿಭಾಗವನ್ನು ಮೊಟಕುಗೊಳಿಸಿರುವುದನ್ನು ಹಾಗೂ ವಿವಿಧ ಚಿಕಿತ್ಸಾ ಸೌಲಭ್ಯಗಳ ಕೊರತೆಯನ್ನು ಪ್ರತಿಭಟಿಸಿ ಮಂಗಲ್ಪಾಡಿ ಜನಕೀಯ ವೇದಿ ಆಸ್ಪತ್ರೆಯ ಮುಂಭಾಗ ರೋಗಿಯನ್ನು ಮಲಗಿಸಿ ಸಮಾಧಾನಪಡಿಸುವ ದಯನೀಯ ಸ್ಥಿತಿ ಹಾಗೂ ಬಡವರಾದ ರೋಗಿಗಳ ಅಸಹನೀಯ ಕತೆಯನ್ನು ಚಳವಳಿಯಲ್ಲಿ ತೋರಿಸಲಾಗಿದೆ.

ಜನಕೀಯ ವೇದಿ ಆಸ್ಪತ್ರೆಯ ಮುಂಭಾಗ ರೋಗಿಯನ್ನು ಮಲಗಿಸಿ ಸಮಾಧಾನಪಡಿಸುವ ದಯನೀಯ ಸ್ಥಿತಿ ಹಾಗೂ ಬಡವರಾದ ರೋಗಿಗಳ ಅಸಹನೀಯ ಕತೆಯನ್ನು ಚಳವಳಿಯಲ್ಲಿ ತೋರಿಸಲಾಗಿದೆ.

ಇಲಾಖೆಯ ಸಚಿವೆ ರಾಜ್ಯದಾದ್ಯಂತ ಸಂಚರಿಸಿ ಆಸ್ಪತ್ರೆಗಳಲ್ಲಿ ಅಧುನಿಕ ರೀತಿಯ ಸೌಕರ್ಯಗಳನ್ನು ಏರ್ಪಡಿಸುವುದಾಗಿ ಹೇಳುತ್ತಿರುವಾಗ ರಾಜ್ಯದ ಉತ್ತರ ಭಾಗದ ತುತ್ತ ತುದಿಯಲ್ಲಿರುವ ತಾಲೂಕು ಆಸ್ಪತ್ರೆಯಲ್ಲಿ ಇರುವ ಸೌಕರ್ಯವನ್ನು ನಿಲುಗಡೆಗೊಳಿಸಿರುವುದರ ವಿರುದ್ದ ಜನರ ಪ್ರತಿಭಟನೆ ಚಳವಳಿಯಲ್ಲಿ ಕಂಡುಬಂದಿದೆ. ಬುಧವಾರ ಅಪರಾಹ್ನದಿಂದ ರಾತ್ರಿ ತನಕ ಪ್ರತಿಭಟನೆ ನಡೆಯಿತು. ಕರೀಂ ಪೂನಾ ಅಧ್ಯಕ್ಷತೆ ವಹಿಸಿದರು. ಅಶ್ರಫ್ ಬಡಾಜೆ, ಸತ್ಯನ್.ಸಿ ಉಪ್ಪಳ, ಅಬ್ದುಲ್ ರಹಿಮಾನ್, ಸಿದ್ದಿಕ್ ಕೈಕಂಬ, ಒ.ಎಂ ರಶೀದ್, ವಲ್ಸರಾಜ್.ಕೆಪಿ, ಮೆಹಮೂದ್ ಕೈಕಂಬ, ಅಶ್ರಫ್, ಅಬುತಮಾಂ ಮೊದಲಾದವರು ಮಾತನಾಡಿದರು.


Share with

Leave a Reply

Your email address will not be published. Required fields are marked *