ಮಂಜೇಶ್ವರ: ತೂಮಿನಾಡು ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ಶ್ರೀ ಮಹಾಕಾಳಿ ಮತ್ತು ಮುಗೇರ ದೈವಗಳ ಹಾಗೂ ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ ಮಾ.2 ಮತ್ತು 3ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
2ರಂದು ಬೆಳಿಗ್ಗೆ 6ಕ್ಕೆ ಸ್ವಸ್ತಿ ಪುಣ್ಯಾಹ, ಗಣಹೋಮ, 7ಕ್ಕೆ ಕೊಡಿ ಮುಹೂರ್ತ, 10ರಿಂದ ದುರ್ಗಾಪೂಜೆ ಮತ್ತು ಕುಂಕುಮಾರ್ಚನೆ, ಮಧ್ಯಾಹ್ನ 12.40ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5ಕ್ಕೆ ಭಂಡಾರ ಏರುವುದು, ರಾತ್ರಿ 7ರಿಂದ 10ರ ತನಕ ಕೊಡಮಂದಾಯ ನೇಮ, 10ರಿಂದ ಮುಂಜಾನೆ ತನಕ ಶ್ರೀ ಮಹಾಕಾಳಿ ನೇಮೋತ್ಸವ ನಡೆಯಲಿದೆ.
3ರಂದು ಬೆಳಿಗ್ಗೆ 5ರಿಂದ ಶ್ರೀ ಮಹಾಕಾಳಿ ದೇವಿಯ ಗಂಧ ಪ್ರಸಾದ ಸ್ವೀಕಾರ, ಸಂಜೆ 6ರಿಂದ 8ರ ತನಕ ಧರ್ಮದೈವ ಗುಳಿಗ ನೇಮ, ರಾತ್ರಿ 9ರಿಂದ 12ರ ತನಕ ಪಂಜುರ್ಲಿ ನೇಮ, 12ರಿಂದ ಮುಂಜಾನೆ ತನಕ ಬ್ರಹ್ಮಶ್ರೀ ಮುಗೇರ ಹಾಗೂ ತನ್ನಿಮಾನಿಗ ದೈವಗಳ ನೇಮ ನಡೆಯಲಿದೆ.
4ರಂದು ಸೂರ್ಯೋದಯಕ್ಕೆ ಬ್ರಹ್ಮಶ್ರೀ ಮುಗೇರ ಹಾಗೂ ತನ್ನಿಮಾನಿಗ ದೈವಗಳಿಂದ ಗಂಧ ಪ್ರಸಾದ ಸ್ವೀಕಾರ, ಬೆಳಿಗ್ಗೆ 8ಕ್ಕೆ ಬಂಡಾರ ಇಳಿಯುವುದು, ಮಧ್ಯಾಹ್ನ 1ಕ್ಕೆ ಕುರಿ ತಂಬಿಲದ ಪ್ರಸಾದ ವಿತರಣೆ ನಡೆಯಲಿದೆ.