ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿಜಿಸ್ಟರ್ ಬಂಟ್ವಾಳ ತಾಲೂಕು ಮಹಿಳಾ ಜಾನವಿಕಾಸ ಕೇಂದ್ರದ ಕಾರ್ಯಕ್ರಮದ ಅಡಿಯಲ್ಲಿ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಅಲ್ಲಿಪಾದೆ ದೇವಸ್ಯಪಡೂರು, ನಾವೂರ ಇದರ ಸಹಭಾಗಿತ್ವದಲ್ಲಿ ಜ್ಞಾನವಿಕಾಸ ವಾರ್ಷಿಕೋತ್ಸವ ಕಾರ್ಯಕ್ರಮ ಶ್ರೀರಾಮ ಭಜನಾ ಮಂದಿರ ಅಲ್ಲಿಪಾದೆಯಲ್ಲಿ ಜರಗಿತು.
ಅಖಿಲ ಕರ್ನಾಟಕ ಜನಜಗೃತಿ ವೇದಿಕೆ ಬಂಟ್ವಳ ವಲಯ ಅಧ್ಯಕ್ಷ ಮನ್ಮಥ ರಾಜ್ ಜೈನ್ ಆಟಿ ಕೆಲಂಜನಿಗೆ ದವಸಧಾನ್ಯ ನೀಡಿ,ದೀಪಾ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಹಿಳೆಯರಿಗೆ ಜ್ಞಾನ ವಿಕಾಸ ಕೇಂದ್ರಗಳು ತಮ್ಮ ಪ್ರತಿಭೆ ಯನ್ನು ವ್ಯಕ್ತಪಡಿಸಲು ಇದೊಂದು ಉತ್ತಮ ವೇದಿಕೆ ಆಗಿದೆ . ಹೂ ಗುಚ್ಛ, ಕ್ರೋಟನ್ ಎಲೆ ಯಿಂದ ಹಾರ ತಯಾರಿ, ಸ್ವ ಉದ್ಯೋಗ, ಪ್ರತಿಯೊಂದು ವಿಷಯವನ್ನು ಮಹಿಳೆಯಾರು ಕಲಿತಿರವುದು ಹೆಮ್ಮೆಯ ವಿಷಯ ವಾಗಿದೆ ಎಂದರು.
ಕಾರ್ಯಕ್ರಮ ಅಧ್ಯಕ್ಷಥೆಯನ್ನು ಒಕ್ಕೂಟದ ಅಧ್ಯಕ್ಷರಾದ ನವೀನ್ ಶೆಟ್ಟಿ ವಹಿಸಿದರು
ಕಷ್ಟದ ಜೀವನ ದಲ್ಲಿ ನಮ್ಮ ಮನೆಯ ಸುತ್ತಮುತ್ತ ಸಿಗುವ ಸೊಪ್ಪು ಗೆಡ್ಡೆ ಗೆಣಸು ಉಪಯೋಗ ಮಾಡುದು. ದುಂದು ವೆಚ್ಚ ಮಾಡದೇ ಕಡಿಮೆ ಖರ್ಚ್ ಮಾಡುವ ಬಗ್ಗೆ ಜ್ಞಾನ ವಿಕಾಸ ಕೇಂದ್ರದಲ್ಲಿ ತಿಂಡಿ ತಿನಿಸು ತಯಾರಿಸುವ ಬಗ್ಗೆ, ಹಿಂದಿನ ಕಾಲದ ಆಹಾರ ಪದ್ಧತಿಯಾಬಗ್ಗೆ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ರವರು ಮಾತನಾಡಿದರು.
ಜ್ಞಾನ ವಿಕಾಸ ಕೇಂದ್ರದ ತಾನೂ ಒಂದು ಸದಸ್ಯೆ ಎಂದು ಹೆಮ್ಮೆ ಯಾಗುತ್ತಿದೆ. ಜ್ಞಾನವಿಕಾಸ ಕೇಂದ್ರದ ಮೂಲಕ
ಬ್ಯಾಂಕ್ ವ್ಯವಹಾರ, ಸ್ವಚ್ಛತೆ, ಅತೀಥಿ ಸತ್ಕಾರ, ಮಾತು ಗಾರಿಕೆಗಳನ್ನು ಕಲಿತೆ ಎಂದು ಸರಪಾಡಿ ಪಂಚಾಯತ್ ಅಧ್ಯಕ್ಷರು ಲೀಲಾವತಿ ಯವರು ಹೇಳಿದರು.
ವಲಯದ ಅಧ್ಯಕ್ಷರು ಮನೋಹರ್ ರವರು ಜ್ಞಾನ ವಿಕಾಸ ಕೇಂದ್ರ ಇದೆ ರೀತಿ ಮುಂದುವರಿಯಲಿ ಎಂದು ಶುಭ ಹಾರೈಕೆ ಮಾಡಿದರು.
ಯೋಜನೇಯೂ ನಮ್ಮ ಊರಿನಲ್ಲಿ ಒಳ್ಳೆಯ ಅಭಿವೃದ್ಧಿ ಪಥವಾಗಿ ಸಾಗುತಿದೆ. ಬೇಡದ ವಿಷಯ ಕ್ಕೆ ಕಿವಿ ಕೊಡದೆ ಇನ್ನೂ ಮುಂದೆಯೂ ಒಳ್ಳೆ ರೀತಿಯಲ್ಲಿ ನಡೆಯಲಿ ಹಾಗೂ ಹಳೆಯ ತಿಂಡಿ ತಿನಿಸುಗಳ ಬಗ್ಗೆ ನಮ್ಮ ಮಕ್ಕಳಿಗೂ ತಿಳಿಸಬೇಕು ಎಂದು ಶ್ರಿ ರಾಮ ಭಜನಾ ಮಂಡಳಿ ಯ ಕಾರ್ಯದರ್ಶಿ ಭವಾನಿ ಶಂಕರ್ ರಾವ್ ರವರು ಅಭಿಪ್ರಾಯ ಪಟ್ಟರು
ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತಂದು ಸ್ವಾವಲಂಬಿಗಳಾಗಿ ಮಾಡುವ ಉದ್ದೇಶದಿಂದಲೇ ಮಹಿಳಾ ಜ್ಞಾನವಿಕಾಸ ಕೇಂದ್ರಗಳ ರಚನೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಟಿಯ ವಿಶೇಷತೆಗೋಸ್ಕರ
ಆಟಿ ಕಲೆಂಜಾ ವೇಷ ಭೂಷಣ, ಚೆನ್ನೆ ಮನೆ ಆಟ, ಹಳೆ ಕಾಲ ದ ವಸ್ತುಗಳ ಹಾಗೂ ಆಟಿ ತಿಂಡಿ ತಿನಿಸುಗಳನ್ನು ಪ್ರದರ್ಶನ ಮಾಡಲಾಯಿತು.
ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಗಳಿಂದ ಸಂಸ್ಕೃತಿಕಾ ಕಾರ್ಯಕ್ರಮ ಜರಗಿತು
.
ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಒಕ್ಕೂಟ ಅಧ್ಯಕ್ಷರು, ಪದಾಧಿಕಾರಿಗಳು ಸೇವಾಪ್ರತಿನಿಧಿ ವಿಜಯ, ರಕ್ಷಿತ ಹಾಗೂ ಜನಜಗೃತಿ ಸದಸ್ಯರು ಸದಾನಂದ ಉಪಸ್ಥಿತರಿರು.
ಜ್ಞಾನ ವಿಕಾಸ ಸಮನ್ವಯಧಿಕಾರಿ ಶ್ರುತಿ ಸ್ವಾಗತಿಸಿ, ಸೇವಾಪ್ರತಿನಿಧಿ ವಸಂತಿ ವಂದಿಸಿದರು .ವಲಯದ ಮೇಲ್ವಿಚಾರಕರು ರೂಪ ರೈ ಕಾರ್ಯಕ್ರಮ ನಿರೂಪಿಸಿದರು.